alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಯುವತಿಯೊಂದಿಗಿನ ಕೀಚಕರ ಕೃತ್ಯ

ಉತ್ತರ ಪ್ರದೇಶದ ಉನ್ನಾವೋ ದಲ್ಲಿ ಮೂವರು ಯುವಕರು, ಒಬ್ಬ ಯುವತಿಗೆ ಕಿರುಕುಳ ಕೊಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿಗೆ ಮೂರು ಜನ ಕಾಟ ನೀಡ್ತಾ ಇದ್ದರೆ, ಇನ್ನೋರ್ವ ದೃಶ್ಯಗಳನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡ್ತಾ ಇದ್ದ.

ಯುವತಿಯನ್ನು ಒಬ್ಬ ಯುವಕ ಅರಣ್ಯದಲ್ಲಿ ಎಳೆಯುತ್ತಾ ಬರುತ್ತಾನೆ. ಆಗ ಯುವತಿ ಅಣ್ಣಾ ಹೀಗೆ ಮಾಡಬೇಡಿ ಎಂದು ಕಿರುಚುತ್ತಾಳೆ. ಆಗ ಕಾಮುಕ ಆಕೆಗೆ ಚಪ್ಪಲಿಯಿಂದ ಹೊಡೆಯುತ್ತಾನೆ. ಸುಮ್ಮನಿದ್ದರೆ ಸರಿ, ಇಲ್ಲದೆ ಇದ್ರೆ ಈ ದೃಶ್ಯವನ್ನು ವೈರಲ್ ಮಾಡೋದಾಗಿ ಬೆದರಿಕೆ ಹಾಕ್ತಾನೆ. ವರದಿಯ ಅನುಸಾರ ಯುವಕ, ಯುವತಿಯನ್ನು ಮನೆಯಿಂದಲೇ ಹೊತ್ತೊಯ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈಗಾಗಲೇ ರಾಹುಲ್, ಆಕಾಶ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ನಾವು ಕಾರ್ಯ ಪ್ರವೃತ್ತರಾಗಿದ್ದೇವೆ. ಅಲ್ಲದೆ ಈ ದೃಶ್ಯದಲ್ಲಿ ಕಾಣುವ ಇನ್ನೊಬ್ಬನಿಗೆ ಬಲೆ ಬೀಸಲಾಗಿದೆ. ಆತನನ್ನು ಬಂಧಿಸಿದ ಬಳಿಕ ಸತ್ಯಾಸತ್ಯತೆ ಬಯಲಿಗೆ ಬರಲಿದೆ ಎಂದು ಪೊಲೀಸ್ ಅಧಿಕಾರಿ ಅನೂಪ್ ಸಿಂಗ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...