alex Certify
ಕನ್ನಡ ದುನಿಯಾ       Mobile App
       

Kannada Duniya

12 ನಿಮಿಷದಲ್ಲಿ 3 ಲಕ್ಷ ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆಯಾಯ್ತು ಕೃತ್ಯ

ದೆಹಲಿಯ ಸಾಕೇತ್ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮೂರು ಲಕ್ಷ ರೂಪಾಯಿ ಕಳ್ಳತನವಾದ ಘಟನೆ ಬೆಳಕಿಗೆ ಬಂದಿದೆ. ಹಾಲಿನ ಉದ್ಯಮ ನಡೆಸುತ್ತಿರುವ ವ್ಯಕ್ತಿ ದೂರಿನ ಮೇಲೆ ಪೊಲೀಸರು ಮಹಿಳೆಯೊಬ್ಬಳ ವಿರುದ್ಧ ತನಿಖೆ ಶುರುಮಾಡಿದ್ದಾರೆ. ಸಿಸಿ ಟಿವಿ ಆಧಾರದ ಮೇಲೆ ಮಹಿಳೆ ಗ್ಯಾಂಗ್ ಹುಡುಕಾಟ ಶುರುವಾಗಿದೆ.

ಪೊಲೀಸ್ ಪ್ರಕಾರ ಹಾಲಿನ ಡೈರಿ ನಡೆಸುತ್ತಿರುವ 44 ವರ್ಷದ ಮಹೇಂದ್ರ ಕುಮಾರ್ ಹಣ ಕಳ್ಳತನವಾಗಿದೆ. ಪ್ರತಿದಿನ ಏಳು ಲಕ್ಷದವರೆಗೆ ವ್ಯವಹಾರ ನಡೆಸುವ ಮಹೇಂದ್ರ ಕುಮಾರ್ ಪ್ರತಿದಿನ ಹಣವನ್ನು ಬ್ಯಾಂಕ್ ಗೆ ಕಟ್ಟುತ್ತಾರೆ. ಎಂದಿನಂತೆ ಸ್ನೇಹಿತನ ಜೊತೆ ಹಣ ತೆಗೆದುಕೊಂಡು ಬ್ಯಾಂಕ್ ಗೆ ಹೋಗಿದ್ದಾರೆ. ಆದ್ರೆ ಸೀಟ್ ನಲ್ಲಿ ಕ್ಯಾಶಿಯರ್ ಇರಲಿಲ್ಲ.

ಕೌಂಟರ್ ನಲ್ಲಿ ಹಣವಿಟ್ಟ ಮಹೇಂದ್ರ ಕುಮಾರ್ ಕುರ್ಚಿ ಮೇಲೆ ಬಂದು ಕುಳಿತಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರು ಮಹಿಳೆಯರು ಯುವಕರ ಜೊತೆ ಮಹೇಂದ್ರ ಕುಮಾರ್ ಮುಂದೆ ಬಂದು ನಿಂತಿದ್ದಾರೆ. ಸ್ವಲ್ಪ ಹೊತ್ತು ಅಲ್ಲಿದ್ದವರು ವಾಪಸ್ ಹೋಗಿದ್ದಾರೆ. ಕ್ಯಾಶಿಯರ್ ಬರ್ತಿದ್ದಂತೆ ಕೌಂಟರ್ ಗೆ ಬಂದ ಮಹೇಂದ್ರ ಹಣ ಕಾಣದೆ ಕಂಗಾಲಾಗಿದ್ದಾರೆ. ಸಿಸಿ ಟಿವಿ ಚೆಕ್ ಮಾಡಿದಾಗ ಮಹಿಳೆಯರು ಕಳ್ಳತನ ಮಾಡಿರುವುದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...