alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಕಾರ್ಡ್ ಕದ್ದು ಶಾಪಿಂಗ್ ಮಾಡ್ತಿದ್ರು ಖದೀಮರು

ಎಟಿಎಂ ಬೂತ್ ಗಳಲ್ಲಿ ಜನರ ಎಟಿಎಂ ಕಾರ್ಡ್ ಕಳ್ಳತನ ಮಾಡಿ ಆನ್ಲೈನ್ ಶಾಪಿಂಗ್ ಮಾಡ್ತಿದ್ದ ಖದೀಮರು ಸಿಕ್ಕಿಬಿದ್ದಿದ್ದಾರೆ. ಉತ್ತರ ಪ್ರದೇಶದ ಆಜಂಘರ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿದ್ದವು. ಕಾರ್ಯಾಚರಣೆಗಿಳಿದ ಪೊಲೀಸರು ಶುಕ್ರವಾರ ನಂಬರ್ ಇಲ್ಲದ ಬೊಲೆರೋದಲ್ಲಿ ಎಟಿಎಂ ಬೂತ್ ಗೆ ಬಂದ ಮೂವರನ್ನು ಬಂಧಿಸಿದ್ದಾರೆ. ಬಂಧಿತರು ಎಟಿಎಂ ಬೂತ್ ನಲ್ಲಿ ಜನರ ಎಟಿಎಂ ಕಾರ್ಡ್ ಕಳ್ಳತನ ಮಾಡಿ ನಂತ್ರ ಹಣ ಡ್ರಾ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳ ಪರ್ಸ್ ನಲ್ಲಿ ಅನೇಕ ಎಟಿಎಂ ಕಾರ್ಡ್ ಹಾಗೂ 23 ಸಾವಿರ ರೂಪಾಯಿ ಸಿಕ್ಕಿದೆ. ಜೊತೆಗೆ ನಂಬರ್ ಇಲ್ಲದ ಬೊಲೆರೋ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...