alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತರೊಂದಿಗೆ ಪಲಾಯನ ಮಾಡುವ ಮುನ್ನ ಎಚ್ಚರ..!

Think before you elope with minorsಕಳೆದ ಜುಲೈನಲ್ಲಿ ಹೈದ್ರಾಬಾದ್ ನ ತ್ರಿಮಲ್ಘೆರಿ ಸಂಚಾರಿ ಠಾಣೆಯ ಪೇದೆ ಪಿ.ಸಾಯಿ ಕುಮಾರ್ ಅವರನ್ನು ಸೈಬರಾಬಾದ್ ಈಸ್ಟ್ ಪೊಲೀಸರು ಬಂಧಿಸಿದ್ರು. ಅಪ್ರಾಪ್ತೆಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಆತನ ಮೇಲಿತ್ತು.

ಆದ್ರೆ ಸಾಯಿ ಕುಮಾರ್ ಅಪ್ರಾಪ್ತೆಯನ್ನು ಅಪಹರಿಸಿರಲಿಲ್ಲ, ಅವಳೊಂದಿಗೆ ಓಡಿ ಹೋಗಿದ್ದ. ಇಬ್ರೂ ಆರ್ಯ ಸಮಾಜದಲ್ಲಿ ಮದುವೆಯಾಗುವವರಿದ್ದು, ಆದ್ರೆ ಸಾಯಿಕುಮಾರ್ ಪ್ರಿಯತಮೆಗೆ ಇನ್ನೂ 18 ವರ್ಷ ತುಂಬಿರಲಿಲ್ಲ. ಆಕೆಯ ತಂದೆ ಬಾಬು ಸಿಂಗ್ ಪ್ರಕರಣ ದಾಖಲಿಸಿದ್ದರಿಂದ ಪೊಲೀಸರು ಸಾಯಿ ಕುಮಾರ್ ನನ್ನು ಬಂಧಿಸಿದ್ರು.

ರಾಷ್ಟ್ರೀಯ ಅಪರಾಧ ದಾಖಲೆ ದಳದ ಮಾಹಿತಿ ಪ್ರಕಾರ ಕಳೆದ ವರ್ಷ ತೆಲಂಗಾಣದಲ್ಲಿ ಮದುವೆ ನೆಪದಲ್ಲಿ ಅಪ್ರಾಪ್ತೆಯರನ್ನು ಅಪಹರಿಸಿದ 173 ಪ್ರಕರಣಗಳು ದಾಖಲಾಗಿವೆ. 700ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳಲ್ಲಿ ಶೇ.18ರಷ್ಟು ಕೇಸ್ ನಲ್ಲಿ ದೌರ್ಜನ್ಯಕ್ಕೊಳಗಾದವರು ಅಪ್ರಾಪ್ತರು. ಇಂತಹ ಪಲಾಯನ ಪ್ರಕರಣಗಳಲ್ಲೆಲ್ಲ ಕಿಡ್ನಾಪ್ ಕೇಸ್ ದಾಖಲಿಸಲಾಗುತ್ತದೆ. ಸಮ್ಮತಿ ಮೇಲೆ ಲೈಂಗಿಕ ಕ್ರಿಯೆ ನಡೆದಿದ್ರೂ ಅದು ಅತ್ಯಾಚಾರವೆಂದೇ ಪರಿಗಣಿಸಲ್ಪಡುತ್ತದೆ. ಅಕಸ್ಮಾತ್ ಮಹಿಳೆ ಅಪ್ರಾಪ್ತನೊಂದಿಗೆ ಓಡಿ ಹೋಗಿದ್ರೆ ಆಕೆಯ ಮೇಲೂ ಅಪಹರಣ ಪ್ರಕರಣ ದಾಖಲಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...