alex Certify
ಕನ್ನಡ ದುನಿಯಾ       Mobile App
       

Kannada Duniya

3 ಕೋಟಿ ರೂ. ಮೌಲ್ಯದ ವಜ್ರಾಭರಣ ಕಳವು

DIAMOND THEFTದೆಹಲಿಯಲ್ಲಿ ದಿನೇ ದಿನೇ ಕಳ್ಳರ ಹಾವಳಿ ಹೆಚ್ಚಾಗ್ತಾ ಇದೆ. ದಕ್ಷಿಣ ದೆಹಲಿಯಲ್ಲಿರುವ ಡಿಫೆನ್ಸ್ ಕಾಲೋನಿ ಬಂಗಲೆಯೊಂದರಲ್ಲಿ ಖದೀಮರು ಕೈಚಳಕ ತೋರಿದ್ದಾರೆ. 3 ಕೋಟಿ ರೂ. ಮೌಲ್ಯದ ವಜ್ರಾಭರಣ ಹಾಗೂ 60,000 ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ.

ತನ್ಮಯ್ ಸೇಠ್ ಎಂಬುವವರಿಗೆ ಸೇರಿದ ಬಂಗಲೆಯಲ್ಲಿ ಕಳ್ಳತನ ನಡೆದಿದೆ. ತನ್ಮಯ್, ಜೆಟ್ ಏರ್ ವೇಸ್ ನ ಉಪಾಧ್ಯಕ್ಷ ಅವ್ನೀತ್ ಸಿಂಗ್ ಅವರ ಅಳಿಯ. ಭಾನುವಾರ ತನ್ಮಯ್, ಕುಟುಂಬ ಸಮೇತ ಮದುವೆ ಸಮಾರಂಭಕ್ಕೆ ತೆರಳಿದ್ರು. ಮದುವೆ ಮುಗಿಸಿಕೊಂಡು ಸೋಮವಾರ ಅವರು ವಾಪಸ್ ಬಂದಾಗ ಕಳ್ಳರು ಕರಾಮತ್ತು ತೋರಿರೋದು ಬಯಲಾಗಿದೆ.

ಬಂಗಲೆಯ ಮೇನ್ ಗೇಟ್ ಮತ್ತು ಕಿಟಕಿಯೊಂದರ ಬಾಗಿಲು ತೆರೆದೇ ಇತ್ತು. ಹಾಗಾಗಿ ಕಳ್ಳರು ಅನಾಯಾಸವಾಗಿ ನುಗ್ಗಿ ವಜ್ರಾಭರಣ ಮತ್ತು ನಗದು ಲಪಟಾಯಿಸಿದ್ದಾರೆ. ಕಳ್ಳತನ ನಡೆದ ಸಮಯದಲ್ಲಿ ಮನೆಯೊಳಗೆ ಇಬ್ಬರು ಕೆಲಸಗಾರರು ಕೂಡ ಇದ್ರು. ಅವರು ಗಾಢ ನಿದ್ದೆಯಲ್ಲಿದ್ದಾಗ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...