alex Certify
ಕನ್ನಡ ದುನಿಯಾ       Mobile App
       

Kannada Duniya

ಲ್ಯಾಪ್ ಟಾಪ್ ಕಳ್ಳತನ ಮಾಡಿ ಹಣಕ್ಕೆ ಬೇಡಿಕೆಯಿಟ್ರು ಖದೀಮರು

ದೆಹಲಿ ಪೊಲೀಸ್ ಠಾಣೆಯಲ್ಲಿ ವಿಚಿತ್ರ ಪ್ರಕರಣವೊಂದು ದಾಖಲಾಗಿದೆ. ಮಕ್ಕಳು ಅಥವಾ ದೊಡ್ಡವರನ್ನು ಅಪಹರಿಸಿದ ಅಪಹರಣಕಾರರು ಸಾಮಾನ್ಯವಾಗಿ ಹಣಕ್ಕೆ ಬೇಡಿಕೆಯಿಡ್ತಾರೆ. ಆದ್ರೆ ಲ್ಯಾಪ್ ಟಾಪ್ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣವೊಂದು ನಡೆದಿದೆ.

ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೆಸ್ಟೋರೆಂಟ್ ನಲ್ಲಿ ವಿದ್ಯಾರ್ಥಿಯೊಬ್ಬನ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಖದೀಮರು ಹಣಕ್ಕೆ ಬೇಡಿಕೆಯಿಟ್ಟಿದ್ದರು. 20 ಸಾವಿರ ರೂಪಾಯಿ ನೀಡುವಂತೆ ಕೇಳಿದ್ದರು. ಕನ್ನಾಟ್ ಪ್ಲೇಸ್ ಹೊಟೇಲ್ ಒಂದರಲ್ಲಿ ವಿದ್ಯಾರ್ಥಿ ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದಾರೆ. ನಂತ್ರ ವಾಟ್ಸ್ ಅಪ್ ಕಾಲ್ ಮಾಡಿ 20 ಸಾವಿರ ರೂಪಾಯಿ ನೀಡುವಂತೆ ಹೇಳಿದ್ದಾರೆ.

ಪೇಟಿಎಂನಲ್ಲಿ ಹಣ ನೀಡದಿದ್ದಲ್ಲಿ ಲ್ಯಾಪ್ ಟಾಪ್ ಒಡೆದು ಹಾಕುವುದಾಗಿ ಬೆದರಿಸಿದ್ದಾರೆ. ಮುಖಾಮುಖಿಯಾಗಿ ಹಣ ನೀಡುವುದಾಗಿ ವಿದ್ಯಾರ್ಥಿ ಹೇಳಿದ್ದು, ಪೊಲೀಸ್ ಹೆಣೆದ ಜಾಲಕ್ಕೆ ಆರೋಪಿಗಳಿಬ್ಬರು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳು ಹರ್ಯಾಣ ಮೂಲದವರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...