alex Certify
ಕನ್ನಡ ದುನಿಯಾ       Mobile App
       

Kannada Duniya

ಬುರ್ಖಾ ಧರಿಸಿ ಮಾಲೀಕನ ಮನೆ ದೋಚಿದ್ದವನು ಸಿಕ್ಕಿ ಬಿದ್ದಿದ್ದೇಗೆ..?

Burqa 2346

ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಬುರ್ಖಾ ಧರಿಸಿ ತನ್ನ ಮಾಲೀಕನ ಮನೆಯನ್ನು ದೋಚಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಸಿಸಿ ಟಿವಿಯಲ್ಲಿ ಕಳ್ಳನ ಕರಾಮತ್ತು ದಾಖಲಾಗಿದ್ದು, ಆತನ ನಡಿಗೆ ಶೈಲಿಯೇ ಸಿಕ್ಕಿ ಬೀಳುವಂತೆ ಮಾಡಿದೆ.

ಹೈದರಾಬಾದಿನಲ್ಲಿ ಈ ಘಟನೆ ನಡೆದಿದ್ದು, ಓಂಪ್ರಕಾಶ್ ಅನುರಾಗ್ ಎಂಬಾತ ತನ್ನ ಮಾಲೀಕ ಶ್ರೀಕಾಂತ್ ಅವರ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಶ್ರೀಕಾಂತ್ ಅವರ ಪತ್ನಿ ಸರ್ಕಾರಿ ನೌಕರಿಯಲ್ಲಿದ್ದ ಕಾರಣ ಹಗಲು ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತು ಓಂಪ್ರಕಾಶ್ ಈ ಕೆಲಸಕ್ಕೆ ಮುಂದಾಗಿದ್ದ.

ತನ್ನ ಪ್ಲಾನ್ ನಂತೆ ಶ್ರೀಕಾಂತ್ ಅವರ ಮನೆಯ ನಕಲಿ ಕೀ ಸಂಪಾದಿಸಿದ್ದ ಓಂಪ್ರಕಾಶ್, ಅವರ ಅಪಾರ್ಟ್ಮೆಂಟ್ ಗೆ ಸಿಸಿ ಟಿವಿ ಅಳವಡಿಸಿದ್ದ ಹಿನ್ನಲೆಯಲ್ಲಿ ಗುರುತು ಸಿಗಬಾರದೆಂಬ ಕಾರಣಕ್ಕೆ ಬುರ್ಖಾ ಧರಿಸಿದ್ದ. ಸಲೀಸಾಗಿ ಮನೆ ಪ್ರವೇಶಿಸಿ ನಗ, ನಗದನ್ನು ದೋಚಿದ್ದ. ಸಿಸಿ ಟಿವಿ ದೃಶ್ಯಾವಳಿಯನ್ನು ವೀಕ್ಷಿಸಿದ ಶ್ರೀಕಾಂತ್ ಅವರಿಗೆ ತಮ್ಮ ನೌಕರನೊಬ್ಬನ ನಡಿಗೆ ಶೈಲಿ ಇದೇ ರೀತಿ ಇರುವುದು ಅರಿವಿಗೆ ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ಓಂಪ್ರಕಾಶ್ ನನ್ನು ಬಂಧಿಸಿರುವ ಪೊಲೀಸರು ನಗ- ನಗದು ವಶಪಡಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...