alex Certify
ಕನ್ನಡ ದುನಿಯಾ       Mobile App
       

Kannada Duniya

ದರೋಡೆ ಮಾಡಲು ಅನುಸರಿಸುತ್ತಿದ್ರು ಈ ವಿಧಾನ…!

ದೆಹಲಿ: ಪಿಜ್ಜಾ ಡೆಲಿವರಿ ಬಾಯ್ ಗಳನ್ನ ಗುರಿ ಮಾಡಿ ರಾಬರಿ ಮಾಡುತ್ತಿದ್ದ ತಂಡವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮೂರು ಘಟನೆಗಳಲ್ಲಿ ಆರೋಪಿಗಳು ವಿವಿಧ ರೆಸ್ಟೋರೆಂಟ್ ಗಳಿಂದ ಝೊಮೇಟೊ ಆಪ್ ಮೂಲಕ ಪಿಜ್ಜಾ ಆರ್ಡರ್ ಮಾಡಿದ್ದಾರೆ. ಡೆಲಿವರಿ ಬಾಯ್ ಗಳು ಬಂದ ಮೇಲೆ ಅವರಿಗೆ ಚಾಕು ತೋರಿಸಿ ಬೆದರಿಕೆ ಹಾಕಿ ಹಣ ದೋಚಿದ್ದಾರೆ.

ಅಮರ್ ಕಾಲೋನಿ ನಿವಾಸಿಗಳಾದ ಕರಣ್ ಮಹಾಜನ್ (19), ದೀಪಕ್ ( 23), ಚಿರಾಗ್ ಶರ್ಮ(23) ಬಂಧಿತರು. ಅವರಿಂದ ಮೂರು ಸಾವಿರ ನಗದು, ಎಟಿಎಂ ಸ್ವೈಪ್ ಮಾಡುವ ಯಂತ್ರ, ಎರಡು ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ.

ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಕರಣ್ ಮಹಾಜನ್ ನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಉಳಿದವರನ್ನು ಬಂಧಿಸಲಾಯಿತೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...