alex Certify
ಕನ್ನಡ ದುನಿಯಾ       Mobile App
       

Kannada Duniya

ಪಂಜಾಬಿ ಗಾಯಕನ ಮನೆಯಲ್ಲಿ ಕಳ್ಳತನ

ಪಂಜಾಬ್ ನ ಫತೇಘರ್ ಸಾಹೇಬ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲಿ ಖ್ಯಾತ ಪಂಜಾಬಿ ಗಾಯಕ ಬಬ್ಬು ಮಾನ್ ನಿವಾಸ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ನಗ-ನಗದು ದೋಚಲಾಗಿದೆ.

ಫತೇಘರ್ ಸಾಹೇಬ್ ಜಿಲ್ಲೆಯ ಖಾಂತ್ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಗಾಯಕ ಬಬ್ಬು ಮಾನ್, ಮಲ್ಕಿತ್ ಸಿಂಗ್, ಹರ್ ಪ್ರೀತ್ ಸಿಂಗ್ ರ ನಿವಾಸಗಳು ಹಾಗೂ ಒಂದು ಕ್ಲಿನಿಕ್ ಹಾಗೂ ಕಿರಾಣಿ ಅಂಗಡಿಗೂ ಕಳ್ಳರು ಕನ್ನ ಹಾಕಿದ್ದಾರೆ.

ಮೂರು ನಿವಾಸ ಹಾಗೂ ಎರಡು ಅಂಗಡಿಗಳ ಬೀಗ ಒಡೆದು ಒಳ ಪ್ರವೇಶಿಸಿರುವ ಕಳ್ಳರು, ನಗ-ನಗದು ದೋಚಿಕೊಂಡು ಪರಾರಿಯಾಗಿದ್ದಾರೆನ್ನಲಾಗಿದೆ. ಕಳ್ಳತನ ಸಂಬಂಧ ಸಗೋಲ್ ಚೌಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...