alex Certify
ಕನ್ನಡ ದುನಿಯಾ       Mobile App
       

Kannada Duniya

ಜಾನುವಾರು ಕಳ್ಳರೆಂದು ಭಾವಿಸಿ ವಿದ್ಯಾರ್ಥಿಗಳಿಗೆ ಗೂಸಾ..?

Crim kl

ರಾಮನಗರ: ತಡರಾತ್ರಿ ಜಾನುವಾರು ಕದಿಯಲು ಬಂದಿದ್ದ ಕಳ್ಳರಿಗೆ, ಗ್ರಾಮಸ್ಥರು ಥಳಿಸಿದ ಘಟನೆ ರಾಮನಗರ ಜಿಲ್ಲೆಯ ಕಟುಕನಪಾಳ್ಯದಲ್ಲಿ ನಡೆದಿದೆ. ಆದರೆ, ತಾವು ಟ್ರಕ್ಕಿಂಗ್ ಗೆ ಬಂದ ವಿದ್ಯಾರ್ಥಿಗಳೆಂದು ಹಲ್ಲೆಗೊಳಗಾದವರು ಹೇಳಿಕೊಂಡಿದ್ದಾರೆ.

ಕಟುಕನ ಪಾಳ್ಯದಲ್ಲಿ ಇತ್ತೀಚೆಗೆ ಜಾನುವಾರು ಕಳವು ಹೆಚ್ಚಿದ್ದು, ತಡರಾತ್ರಿ ಗ್ರಾಮದ ದಾನಪ್ಪ ಎಂಬುವವರ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕದಿಯಲು ಬಂದ ಆರೋಪದ ಮೇಲೆ, ಐವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಟಾಟಾ ಸಫಾರಿ ವಾಹನದಲ್ಲಿ ಜಾನುವಾರು ಕಳವಿಗೆ ಬಂದಿದ್ದ ರಘು, ಶ್ರೀಕಾಂತ್, ವೇದಮೂರ್ತಿ ಸೇರಿದಂತೆ ಐವರನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ, ಸಫಾರಿ ಗಾಜುಗಳನ್ನು ಪುಡಿಮಾಡಿದ್ದಾರೆ.

ಐವರನ್ನು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವರಲ್ಲಿ ಇಬ್ಬರು ಬೆಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳಾಗಿದ್ದಾರೆ. ಇವರೆಲ್ಲಾ ಸಾವನದುರ್ಗ ಬೆಟ್ಟಕ್ಕೆ ಟ್ರಕಿಂಗ್ ಬಂದಿದ್ದು, ತಡರಾತ್ರಿಯಾಗಿದ್ದ ಕಾರಣ, ವಾಹನ ನಿಲ್ಲಿಸಿಕೊಂಡಿದ್ದರೆನ್ನಲಾಗಿದೆ. ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...