alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಯಿಂದ್ಲೇ ಕಾರ್ ಖರೀದಿಸಿದ್ದ ನಕಲಿ ಕಾಲ್ ಸೆಂಟರ್ ಕಿಂಗ್ ಪಿನ್

call-centre

ಥಾಣೆ ಪೊಲೀಸರು ಬಯಲಿಗೆಳೆದ ನಕಲಿ ಕಾಲ್ ಸೆಂಟರ್ ಜಾಲ ವಿರಾಟ್ ಕೊಹ್ಲಿಯನ್ನೂ ಬಿಟ್ಟಿಲ್ಲ. ಇದೀಗ ಬಯಲಾಗಿರೋ ಆಘಾತಕಾರಿ ಮಾಹಿತಿಯೇನೆಂದ್ರೆ ಈ ನಕಲಿ ಕಾಲ್ ಸೆಂಟರ್ ದಂಧೆಯ ಕಿಂಗ್ ಪಿನ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಬಳಿಯಿಂದ ಆಡಿ ಆರ್-8 ಕಾರನ್ನು ಖರೀದಿಸಿದ್ದ. ಸಾಗರ್ ಠಕ್ಕರ್ ಅಲಿಯಾಸ್ ಶಗ್ಗಿ 3 ಕೋಟಿ ರೂಪಾಯಿ ಕೊಟ್ಟು ಕೊಹ್ಲಿ ಬಳಿ ಕಾರು ಕೊಂಡುಕೊಂಡು ಅದನ್ನ ತನ್ನ ಪ್ರಿಯತಮೆಗೆ ಉಡುಗೊರೆಯಾಗಿ ನೀಡಿದ್ದ.

ಆದ್ರೆ ಸಾಗರ್ ನ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಕೊಹ್ಲಿಗೆ ಗೊತ್ತಿಲ್ಲ, ಈ ದಂಧೆಗೂ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ ಅಂತಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸದ್ಯ ಸಾಗರ್ ಠಕ್ಕರ್ ತನ್ನ ಸಹೋದರಿ ರೀಮಾ ಜೊತೆ ದುಬೈನಲ್ಲಿ ಅಡಗಿ ಕೂತಿದ್ದಾನೆಂಬ ಅನುಮಾನ ಪೊಲೀಸರದ್ದು. ರೀಮಾ ಕೂಡ ಈ ಅಕ್ರಮದಲ್ಲಿ ಭಾಗಿಯಾಗಿದ್ದಾಳೆ ಎನ್ನಲಾಗ್ತಿದೆ. ಬೋರಿವಿಲಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ್ದ ಸಾಗರ್ ಅಲಿಯಾಸ್ ಶಿಗ್ಗಿ ನಂತರ ಅಹಮದಾಬಾದ್ ಗೆ ಶಿಫ್ಟ್ ಆಗಿದ್ದ. ಆತ ಖತರ್ನಾಕ್ ಐಡಿಯಾಗಳನ್ನೆಲ್ಲ ಕಲಿತಿದ್ದು ಅಲ್ಲೇ. ಮೊದಲು ಅಹಮದಾಬಾದ್ ನಲ್ಲಿ ನಕಲಿ ಕಾಲ್ ಸೆಂಟರ್ ಆರಂಭಿಸಿ, ನಂತರ ಇತರೆಡೆಗೂ ತನ್ನ ಮೋಸದ ಜಾಲವನ್ನು ವಿಸ್ತರಿಸಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...