alex Certify
ಕನ್ನಡ ದುನಿಯಾ       Mobile App
       

Kannada Duniya

ದಾರಿ ತಪ್ಪಿದ ಸಾಧುಗೆ ಜೈಲೂಟ ಗ್ಯಾರಂಟಿ

ಸಂತರ ನಗರಿ ಹರಿದ್ವಾರದಲ್ಲಿ ತಲೆ ತಗ್ಗಿಸುವ ಘಟನೆ ನಡೆದಿದೆ. ಸೂರತ್ ಗಿರಿ ಬಾಂಗ್ಲಾ ಆಶ್ರಮದಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಸಾಧು ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ನಿತ್ಯಾನಂದ ಹೆಸರಿನ ಸಾಧು ವಿರುದ್ಧ ಕಿರುಕುಳದ ದೂರು ದಾಖಲಾಗಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ವಿಡಿಯೋ ಗೇಮ್ ಆಡುವ ನೆಪದಲ್ಲಿ ಬಾಲಕಿಯನ್ನು ನಿತ್ಯಾನಂದ ರೂಮಿಗೆ ಕರೆದುಕೊಂಡು ಹೋಗಿದ್ದಾನೆ. ಈ ಸಂಗತಿ ಅಲ್ಲಿದ್ದ ಮಹಿಳೆಯರಿಗೆ ತಿಳಿದಿದೆ. ಭಕ್ತರು ಸಾಧುವಿನ ಕೋಣೆ ಮೇಲೆ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಘಟನೆಯಿಂದ ಉಳಿದ ಸಾಧುಗಳು ಮುಜುಗರ ಅನುಭವಿಸುತ್ತಿದ್ದಾರೆ. ಪೊಲೀಸರು ಅತ್ಯಾಚಾರ ಯತ್ನದ ಬದಲು ಕಿರುಕುಳದ ದೂರು ದಾಖಲಿಸಿಕೊಂಡಿದ್ದಾರೆಂಬ ದೂರು ಕೇಳಿ ಬಂದಿದೆ. ವಿಚಾರಣೆ ನಂತ್ರ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...