alex Certify
ಕನ್ನಡ ದುನಿಯಾ       Mobile App
       

Kannada Duniya

ವಿಧವೆ ರೇಪ್ ಮಾಡಿದ ಪತಿ–ವಿಡಿಯೋ ಮಾಡಿದ್ಲು ಪತ್ನಿ

video_1496645172_749x421

ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ವಿಧವೆಯೊಬ್ಬಳ ಜೀವನದ ಜೊತೆ ದಂಪತಿ ಆಟವಾಡಿದ್ದಾರೆ. 60 ವರ್ಷದ ವ್ಯಕ್ತಿ ವಿಧವೆ ಮೇಲೆ ಅತ್ಯಾಚಾರವೆಸಗಿದ್ರೆ ಆತನ ಪತ್ನಿ ಇದನ್ನು ವಿಡಿಯೋ ಮಾಡಿದ್ದಾಳೆ. ಸತತ ಮೂರು ತಿಂಗಳುಗಳ ಕಾಲ ಈ ಪ್ರಕ್ರಿಯೆ ನಡೆದಿದೆ. ಮಹಿಳೆಯನ್ನು ಬೆದರಿಸಿ ಆಕೆಯನ್ನು ಬಲಿಪಶು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಮಾಹಿತಿ ಪ್ರಕಾರ ಖಮ್ಮಮ್ ಜಿಲ್ಲೆಯ ಸಣ್ಣ ಪಟ್ಟಣದ ನಿವಾಸಿ ವಿಧವೆ ಮಹಿಳೆಯೊಬ್ಬಳಿಗೆ 60 ವರ್ಷದ ಸತ್ಯನಾರಾಯಣ ಹಾಗೂ ಆತನ ಪತ್ನಿ ವಸಂತಾಳ ಪರಿಚಯವಿತ್ತು. ಆಗಾಗ ಅವರ ಮನೆಗೆ ಹೋಗಿ ಬರ್ತಾ ಇದ್ದಳು ಮಹಿಳೆ. ಮೂರು ತಿಂಗಳ ಹಿಂದೆ ಬಿಯರ್ ನೀಡಲು ಹೋಗಿದ್ದಾಳೆ. ಈ ವೇಳೆ ಸತ್ಯನಾರಾಯಣ ಹಾಗೂ ವಸಂತಾಳ ಜೊತೆ ಬಿಯರ್ ಸೇವಿಸಿದ್ದಾಳೆ.

ಬಿಯರ್ ನಶೆಯಲ್ಲಿದ್ದ ಆಕೆಯ ಜೊತೆ ಸತ್ಯನಾರಾಯಣ ಸಂಬಂಧ ಬೆಳೆಸಿದ್ದಾನೆ. ಇದನ್ನು ಆತನ ಪತ್ನಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾಳೆ. ನಂತ್ರ ವಿಡಿಯೋ ತೋರಿಸಿ ಬೆದರಿಸಿದ್ದಾರೆ. ವಿಡಿಯೋ ಮುಂದಿಟ್ಟುಕೊಂಡು ಸತತ ಮೂರು ತಿಂಗಳು ಅತ್ಯಾಚಾರವೆಸಗಿದ್ದಾನೆ ಸತ್ಯನಾರಾಯಣ.

ಪೀಡಿತ ಮಹಿಳೆ ಅಲಂಕಾರಿಕ ಅಂಗಡಿ ನಡೆಸುತ್ತಿದ್ದಾಳೆ. ಈಕೆ ಸತ್ಯನಾರಾಯಣನಿಂದ 80 ಸಾವಿರ ಸಾಲ ಪಡೆದಿದ್ದಳು ಎನ್ನಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...