alex Certify
ಕನ್ನಡ ದುನಿಯಾ       Mobile App
       

Kannada Duniya

MBBS ಸೀಟು ಗಿಟ್ಟಿಸಿಕೊಳ್ಳದ ಪತ್ನಿಗೆ ಸಾವಿನ ಶಿಕ್ಷೆ

ತೆಲಂಗಾಣದ ಖಮ್ಮಮ್ ಜಿಲ್ಲೆಯ ಹರಿಕಾ ಎಂಬಾಕೆಗೆ ಎಂಬಿಬಿಎಸ್ ಸೀಟು ಸಾವು ಬದುಕಿನ ಪ್ರಶ್ನೆಯಾಗಿತ್ತು. ಆದ್ರೆ ಸತತ ಮೂರನೇ ಬಾರಿಗೂ ವೈದ್ಯಕೀಯ ಸೀಟು ಪಡೆಯಲು ವಿಫಲಳಾದ ಹರಿಕಾಳನ್ನು ಆಕೆಯ ಪತಿ ಬೆಂಕಿ ಹಚ್ಚಿ ಕೊಂದುಬಿಟ್ಟಿದ್ದಾನೆ.

ಹರಿಕಾಳ ಪತಿ 26 ವರ್ಷದ ರುಶಿ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ರುಶಿಕುಮಾರ್ ಬಿಟೆಕ್ ಪದವೀಧರ, ಆದ್ರೆ ನಿರುದ್ಯೋಗಿ. ಕಳೆದ 2 ವರ್ಷಗಳಿಂದ ಹರಿಕಾ ಜೊತೆಗೆ ರಾಕ್ ಟೌನ್ ಕಾಲೋನಿಯಲ್ಲಿ ವಾಸವಾಗಿದ್ದ. ಮದುವೆಯಾದಾಗಿನಿಂದ್ಲೂ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ.

ಪತ್ನಿಯನ್ನು ಡಾಕ್ಟರ್ ಮಾಡಿ, ಅವಳು ಸಂಪಾದಿಸುವ ಹಣದಲ್ಲಿ ಮಜವಾಗಿರಬೇಕು ಅನ್ನೋದು ಅವನ ಉದ್ದೇಶವಾಗಿತ್ತು. ಎಂಬಿಬಿಎಸ್ ಸೀಟು ಗಿಟ್ಟಿಸಿಕೊಳ್ಳದೇ ಇದ್ರೆ ವಿಚ್ಛೇದನ ಕೊಡುವುದಾಗಿ ಬೆದರಿಕೆ ಹಾಕಿದ್ದ. ಎರಡು ಬಾರಿ ಪ್ರವೇಶ ಪರೀಕ್ಷೆ ಬರೆದಿದ್ದ ಹರಿಕಾ, ಸೀಟು ಗಿಟ್ಟಿಸಿಕೊಳ್ಳಲು ವಿಫಲಳಾಗಿದ್ಲು.

ಆದ್ರೆ ಈ ವರ್ಷ ಕಾಮಿನೇನಿ ಮೆಡಿಕಲ್ ಕಾಲೇಜಿನಲ್ಲಿ ಆಕೆಗೆ ಬ್ಯಾಚ್ಯುಲರ್ ಆಫ್ ಡೆಂಟಲ್ ಸರ್ಜರಿ ಸೀಟು ಸಿಕ್ಕಿತ್ತು. ಆದ್ರೂ ಪತಿ ರುಶಿಕುಮಾರ್ ಗೆ ಸಮಾಧಾನವಿರಲಿಲ್ಲ. ಇದೇ ಕೋಪದಲ್ಲಿ ಹರಿಕಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...