alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕೊಡದ ಅಪ್ಪನನ್ನೇ ಹೊಡೆದು ಕೊಂದ ಮಗ…!

ವೃದ್ಧಾಪ್ಯದಲ್ಲಿ ಹೆತ್ತವರಿಗೆ ಆಸರೆಯಾಗುವುದು ಮಕ್ಕಳ ಕರ್ತವ್ಯ. ಆದರೆ ತಂದೆ-ತಾಯಿಗೆ ವಯಸ್ಸಾಗುತ್ತಿದ್ದಂತೆ ಅವರ ಬಳಿಯಿರುವ ಆಸ್ತಿ, ಹಣದ ಮೇಲೆ ಕಣ್ಣು ಹಾಕಿ ಲಪಟಾಯಿಸಿಕೊಂಡು ಬಳಿಕ ನಿಕೃಷ್ಟವಾಗಿ ಕಾಣುವ ಪ್ರವೃತ್ತಿ ಮಕ್ಕಳಲ್ಲಿ ಕಂಡುಬರುತ್ತಿದೆ. ಈ ಮಗರಾಯ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ.

ತಂದೆಯ ನಿವೃತ್ತಿಯ ಹಣದಲ್ಲಿ ತನಗೆ ಪಾಲು ನೀಡಲಿಲ್ಲ ಎಂಬ ಕಾರಣಕ್ಕೆ ತೆಲಂಗಾಣದ 22 ವರ್ಷದ ಮಗನೊಬ್ಬ ತನ್ನ ತಂದೆಯನ್ನೇ ಕೊಲೆಗೈದಿದ್ದಾನೆ. ಕೃಷ್ಣ ಎಂಬುವವರು 2017ರಲ್ಲಿ ಜಲಮಂಡಳಿ ಇಲಾಖೆಯಿಂದ ನಿವೃತ್ತರಾಗಿದ್ದರು. ನಿವೃತ್ತಿ ನಿಧಿಯಾಗಿ 6 ಲಕ್ಷ ರೂ. ಪಡೆದಿದ್ದರು. ತಮ್ಮ ಹೆಸರಲ್ಲಿದ್ದ ಆಸ್ತಿಯೊಂದನ್ನು 10 ಲಕ್ಷ ರೂ.ಗೆ ಮಾರಿದ್ದರು. ಈ ಹಣವನ್ನು ತನಗೆ ಹಾಗೂ ತನ್ನ ಇಬ್ಬರು ಸೋದರಿಯರಿಗೆ ಹಂಚುವಂತೆ ಮಗ ತರುಣ್ ತಂದೆಗೆ ಕೇಳಿದ್ದ. 2 ಲಕ್ಷ ರೂ. ತಮ್ಮ ಬಳಿ ಇರಿಸಿಕೊಂಡು ಉಳಿದಿದ್ದನ್ನು ಮೂವರು ಮಕ್ಕಳಿಗೆ ಹಂಚಿದ್ದರು ಕೃಷ್ಣ.

ಕೆಲ ತಿಂಗಳು ಕಳೆಯುತ್ತಿದ್ದಂತೆ ಉಳಿದ 2 ಲಕ್ಷವನ್ನೂ ತನಗೆ ನೀಡುವಂತೆ ತರುಣ್ ತಂದೆಯನ್ನು ಪೀಡಿಸತೊಡಗಿದ. ಕೃಷ್ಣ ಅವರು ನಿರಾಕರಿಸಿದಾಗ, ರಾಡ್‌ನಿಂದ ಹೊಡೆದಿದ್ದಾನೆ. ಪ್ರಜ್ಞೆತಪ್ಪಿ ಬಿದ್ದ ಕೃಷ್ಣ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೆ ಮೃತಪಟ್ಟಿದ್ದರು. ಇಬ್ಬರು ಹೆಣ್ಣುಮಕ್ಕಳು ಕೂಡಾ ತಂದೆಯ ಮೇಲೆ ದಾಳಿ ನಡೆಸಲು ಉತ್ತೇಜನ ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಮೂವರು ಮಕ್ಕಳ ವಿರುದ್ಧ ಈಗ ಪ್ರಕರಣ ದಾಖಲಿಸಿರುವ ಪೊಲೀಸರು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...