alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸ ಕೊಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಟೆಕ್ಕಿ ಅರೆಸ್ಟ್

ಕೆಲಸ ಕೊಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಟೆಕ್ಕಿಯೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಎಂಜನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕೆಲಸ ಕೇಳಿಕೊಂಡು ಕಚೇರಿಗೆ ಬಂದಾಗ ಪಾನೀಯದಲ್ಲಿ ಡ್ರಗ್ಸ್ ಬೆರಸಿ, ಯುವತಿಗೆ ನೀಡಿದ್ದ ವ್ಯಕ್ತಿ ಬಳಿಕ ಆಕೆಯ ನಗ್ನ ಚಿತ್ರವನ್ನು ತಗೆದುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರಿಗೆ ಸಂತ್ರಸ್ತೆ ದೂರು ನೀಡಿದ್ದು, ಇದೇ ವಿಚಾರವಾಗಿ ಚೆನ್ನೈ ಸೈಬರ್ ಕ್ರೈಂ ಪೊಲೀಸರು ಸುಂದರಂ ಎನ್ನುವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಯುವತಿ ನೀಡಿರುವ ದೂರಿನಲ್ಲಿ, ಕಾಲೇಜಿಗೆ ಭೇಟಿ‌ ನೀಡಿದ್ದ ಆರೋಪಿ ವಿದ್ಯಾರ್ಥಿಗಳಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ, 10-20 ಸಾವಿರ ಹಣ ಪಡೆಯುತ್ತಿದ್ದ. ಸಂತ್ರಸ್ತೆಯಿಂದಲೂ ಹಣ ಪಡೆದಿದ್ದ ವ್ಯಕ್ತಿ, ಕೆಲಸ ಕೊಡಿಸದಿದ್ದಾಗ ಹಣ ವಾಪಾಸು ನೀಡುವಂತೆ ಕೇಳಿದ್ದಾಳೆ. ಆಗ ಆರೋಪಿ ನಗ್ನ ಚಿತ್ರ ತೆಗೆದಿರುವುದಾಗಿ ಬೆದರಿಸಿ, ಹಣ ನೀಡುವುದಿಲ್ಲ ಎಂದಿದ್ದಾನೆ.

ಈ ಸಂಬಂದ ದೂರು ನೀಡಿರುವ ಸಂತ್ರಸ್ತೆ, ಲೈಂಗಿಕ ದೌರ್ಜನ್ಯದ ಕುರಿತು ಆತನ ವಿರುದ್ದ ಕ್ರಮ ಕೈಗೊಂಡು ತಾನು ನೀಡಿದ್ದ ಹಣವನ್ನು ವಾಪಾಸು ಕೊಡಿಸುವಂತೆ ಮನವಿ ಮಾಡಿದ್ದಾಳೆ. ದೂರಿನ ಹಿನ್ನಲೆಯಲ್ಲಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿರುವ ಸುಂದರಂನ ವಿಚಾರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...