alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಬಟ್ಟೆ ಬಿಚ್ಚಿಸಿ ಎಂಎಂಎಸ್ ಮಾಡಿದ್ದಾಳೆ ಶಿಕ್ಷಕಿ

teacher

ಉತ್ತರಪ್ರದೇಶದಲ್ಲಿ ಶಾಲಾ ಶಿಕ್ಷಕಿಯೊಬ್ಳು ಮಕ್ಕಳ ಜೊತೆ ಅಕ್ಷರಶಃ ಮೃಗದಂತೆ ವರ್ತಿಸಿದ್ದಾಳೆ. ಸೋನ್ ಬಧ್ರಾ ಗರ್ಲ್ಸ್ ಜೂನಿಯರ್ ಹೈಸ್ಕೂಲ್ ನಲ್ಲಿ ಹೋಮ್ ವರ್ಕ್ ಮಾಡದೇ ಇದ್ದಿದ್ದಕ್ಕೆ 8ನೇ ತರಗತಿಯ ವಿದ್ಯಾರ್ಥಿನಿಯನ್ನು ಅರೆನಗ್ನಗೊಳಿಸಿದ ಶಿಕ್ಷಕಿ ಎರಡು ಗಂಟೆಗಳ ಪರೇಡ್ ಮಾಡಿಸಿದ್ದಾಳೆ. ಅದನ್ನೆಲ್ಲ ಎಂಎಂಎಸ್ ಮಾಡಿದ್ದಾಳೆ.

ಶನಿವಾರ ವಿದ್ಯಾರ್ಥಿನಿಯರು ಹೋಮ್ ವರ್ಕ್ ಮಾಡಿಕೊಂಡು ಬಂದಿಲ್ಲ ಅಂತಾ ಶಾಲೆಯ ಮುಖ್ಯ ಶಿಕ್ಷಕಿ ಮೀನಾ ಸಿಂಗ್ ಅವರಿಗೆ ಶಿಕ್ಷೆ ವಿಧಿಸಿದ್ಲು. ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಎರಡು ಗಂಟೆಗಳ ಕಾಲ ಅರೆನಗ್ನವಾಗಿ ಮಕ್ಕಳಿಂದ ಪರೇಡ್ ಮಾಡಿಸಿದ್ದಾಳೆ. ಅಷ್ಟೇ ಅಲ್ಲ ಅರೆನಗ್ನ ಸ್ಥಿತಿಯಲ್ಲಿ ಪರೇಡ್ ಮಾಡುತ್ತಿದ್ದ ವಿದ್ಯಾರ್ಥಿನಿಯರ ವಿಡಿಯೋ ಕೂಡ ಮಾಡಿದ್ದಾಳೆ.

ಹೋಮ್ ವರ್ಕ್ ಮಾಡಿ ಮುಗಿಸದೇ ಇದ್ರೆ ವಿಡಿಯೋ ಲೀಕ್ ಮಾಡುವುದಾಗಿ ಶಿಕ್ಷಕಿ ಮೀನಾ ಬೆದರಿಸಿದ್ದಾಳೆ. ಶಿಕ್ಷಕಿಯ ಅಮಾನುಷ ಕೃತ್ಯದ ಬಗ್ಗೆ ಮಾಹಿತಿ ತಿಳಿದ ಪೋಷಕರು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸದ್ಯ ಶಿಕ್ಷಕಿ ಮೀನಾ ಸಿಂಗ್ ಳನ್ನು ಅಮಾನತು ಮಾಡಲಾಗಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...