alex Certify
ಕನ್ನಡ ದುನಿಯಾ       Mobile App
       

Kannada Duniya

ಓದಲು ಬಾರದ್ದಕ್ಕೆ ಬಾಲಕಿಯನ್ನು ಕೊಂದೇಬಿಟ್ಟ ಶಿಕ್ಷಕ

girlಕೀನ್ಯಾದ ನೈರೋಬಿಯಲ್ಲಿ ಓದಲು ಬಾರದ್ದಕ್ಕೆ 10 ವರ್ಷದ ಬಾಲಕಿಯನ್ನು ಥಳಿಸಿ ಶಿಕ್ಷಕ ಹತ್ಯೆ ಮಾಡಿದ್ದಾನೆ. ತರಗತಿಯಲ್ಲಿ ಪಾಠ ಓದುವಂತೆ ಶಿಕ್ಷಕ ಬಾಲಕಿಗೆ ಸೂಚಿಸಿದ್ದ, ಆದ್ರೆ ಆಕೆ ಪುಸ್ತಕ ಓದಲು ಬರುವುದಿಲ್ಲ ಎಂದಿದ್ದಾಳೆ. ಸಿಟ್ಟಿಗೆದ್ದ ಶಿಕ್ಷಕ ಬಾಲಕಿಯ ಬೆನ್ನಿನ ಮೇಲೆ ಮನಬಂದಂತೆ ಥಳಿಸಿದ್ದಾನೆ.

ಉಳಿದ ಮಕ್ಕಳಿಂದ್ಲೂ ವಿದ್ಯಾರ್ಥಿನಿಗೆ ಹೊಡೆಸಿದ್ದಾನೆ. ಆಕೆಗೆ ಓದೋದನ್ನು ಕಲಿಸಿ, ಬರದೇ ಇದ್ರೆ ಚೆನ್ನಾಗಿ ಥಳಿಸಿ ಅಂತಾ ಸೂಚಿಸಿದ್ದಾನೆ. ಶಿಕ್ಷಕ ಹಾಗೂ ಸಹಪಾಠಿಗಳು ಕೊಟ್ಟ ಏಟಿನಿಂದ ಸುಸ್ತಾಗಿದ್ದ ಬಾಲಕಿ ಮುಖ್ಯಶಿಕ್ಷಕರಿಗೆ ದೂರು ನೀಡಿದ್ದಲ್ಲದೆ ಮನೆಗೆ ಹೋಗಲು ಅನುಮತಿ ಪಡೆದು ತೆರಳಿದ್ಲು.

ಇದಾಗಿ ನಾಲ್ಕು ದಿನಗಳ ನಂತರ ಬಾಲಕಿಗೆ ತೀವ್ರ ಬೆನ್ನುನೋವು ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವಳ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಯ್ತು, ಅಲ್ಲೇ ಬಾಲಕಿ ಮೃತಪಟ್ಟಿದ್ದಾಳೆ. ಆರೋಪಿ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ. ಇಂತಹ ಘಟನೆ ಈ ಹಿಂದೆ ಕೂಡ ನಡೆದಿತ್ತು ಅಂತಾ ಬಾಲಕಿಯ ಹೆತ್ತವರು ಆರೋಪ ಮಾಡಿದ್ದಾರೆ. ಶಾಲೆಯ ಎಲ್ಲಾ ಶಿಕ್ಷಕರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...