alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಷ್ಯನನ್ನೇ ಕೊಂದ ಶಿಕ್ಷಕಿ, ಕಾರಣ ಗೊತ್ತಾ?

crime-arrest

ಗುರುವನ್ನು ದೇವರಿಗೆ ಹೋಲಿಸುತ್ತಾರೆ. ಗುರು- ಶಿಷ್ಯರ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ, ಇದಕ್ಕೆ ಅಪವಾದ ಎನ್ನಬಹುದಾದ ಘಟನೆಯೊಂದು ರಾಂಚಿಯಲ್ಲಿ ನಡೆದಿದೆ. ಇಲ್ಲಿನ ಶಿಕ್ಷಕಿಯೊಬ್ಬಳು ತನ್ನ ಶಿಷ್ಯನನ್ನೇ ಕೊಂದು ಹಾಕಿದ್ದಾಳೆ.

ರಾಂಚಿಯ ಸಫೈರ್ ಇಂಟರ್ ನ್ಯಾಷನಲ್ ಶಾಲೆಯ ಶಿಕ್ಷಕಿ ನಜ್ಮಾ ಖಾತೂನ್ ಕೊಲೆ ಮಾಡಿದ ಆರೋಪಿ. ಈಕೆ ತನ್ನ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ವಿನಯ್ ಮೆಹತೋ ಎಂಬ ಬಾಲಕನನ್ನು ಕೊಲೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. ವಿನಯ್ ಮೆಹತೋ ಹಾಗೂ ಅವನ ಸಹಪಾಠಿಯಾಗಿದ್ದ ಶಿಕ್ಷಕಿಯ ಮಗಳು ಪ್ರೀತಿಸುತ್ತಿದ್ದರು. ಅವರಿಗೆ ಬುದ್ಧಿ ಹೇಳಿದರೂ ಕೇಳಿರಲಿಲ್ಲ. ಮಕ್ಕಳು ಬುದ್ಧಿ ಹೇಳಿದರೂ ಕೇಳದ ಕಾರಣ, ವಿನಯ್ ಮನೆಗೆ ಬಂದಿದ್ದ ಸಂದರ್ಭದಲ್ಲಿ ಕೊಲೆ ಮಾಡಿದ್ದಾರೆ.

ವಿನಯ್ ಶವ ಶಿಕ್ಷಕಿ ಮನೆಯ ಸಮೀಪ ದೊರೆತ ನಂತರ ಪೊಲೀಸರು ತನಿಖೆ ಕೈಗೊಂಡಿದ್ದರು. ಶಿಕ್ಷಕಿಯ ಮನೆಗೆ ವಿನಯ್ ಹೋಗುವ ದೃಶ್ಯಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಮನೆಗೆ ಬಂದ ಬಾಲಕನ ಮೇಲೆ ಶಿಕ್ಷಕಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದರಿಂದ ಆತ ಗಂಭೀರವಾಗಿ ಗಾಯಗೊಂಡು ಹೊರಹೋಗಿದ್ದಾನೆ. ಹೊರಹೋಗುವ ದೃಶ್ಯ ಕೂಡ ದಾಖಲಾಗಿವೆ. ಇದರ ಆಧಾರದ ಮೇಲೆ ಶಿಕ್ಷಕಿಯನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...