alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಶರಣಾದ ಕಿರು ತೆರೆ ನಟ

Actor-Sai-Prashant

ತಮಿಳುನಾಡಿನ ಖ್ಯಾತ ಕಿರು ತೆರೆ ನಟ ಸಾಯಿ ಪ್ರಶಾಂತ್ ಭಾನುವಾರ ರಾತ್ರಿ ಚೆನ್ನೈನ ತಮ್ಮ ನಿವಾಸದಲ್ಲಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಮದ್ಯದಲ್ಲಿ ವಿಷ ಬೆರೆಸಿ ಅದನ್ನು ಸೇವಿಸಿದ್ದ ಸಾಯಿ ಪ್ರಶಾಂತ್ ಸಾವನ್ನಪ್ಪಿದ್ದಾರೆ.

ತಮ್ಮ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದ ಸಾಯಿ ಪ್ರಶಾಂತ್, ಮೂರು ತಿಂಗಳ ಹಿಂದಷ್ಟೇ ಮರು ಮದುವೆಯಾಗಿದ್ದರು. ವಿಡಿಯೋ ಜಾಕಿಯಾಗಿ ಮನೋರಂಜನಾ ಕ್ಷೇತ್ರ ಪ್ರವೇಶಿಸಿದ್ದ ಅವರು, ಬಳಿಕ ಕಿರು ತೆರೆಯಲ್ಲಿ ಬಿಡುವಿಲ್ಲದ ನಟರಾಗಿದ್ದರು.

‘ಅಣ್ಣಾಮಲೈ’, ‘ಸೆಲ್ವಿ’, ‘ಅರಸಿ’ ಸೇರಿದಂತೆ ಹಲವು ಕಿರು ತೆರೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಅವರು, ‘ನೇರಂ’ ಸೇರಿದಂತೆ ಕೆಲ ತಮಿಳು ಚಿತ್ರಗಳಲ್ಲೂ ನಟಿಸಿದ್ದರು. ಸಾಯಿ ಪ್ರಶಾಂತ್ ಸಾವಿನ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲುಪಾಕ ಮೆಡಿಕಲ್ ಕಾಲೇಜಿಗೆ ರವಾನಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...