alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕಿಯ ಹತ್ಯೆ ಮಾಡಿದ ಪ್ರಿಯಕರ

ಚೆನ್ನೈ: ಪೋಷಕರು ತೋರಿಸಿದ ಹುಡುಗನ್ನು ಮದುವೆಯಾಗಲು ಒಪ್ಪಿದ ಯುವತಿಯನ್ನು ಪ್ರಿಯಕರ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ತಮಿಳುನಾಡಿನ ಪಳನಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿ ಬಿ. ಪವಿತ್ರ (24) ಕೊಲೆಯಾದವಳು. ಸೋದರ ಸಂಬಂಧಿ ರಾಮಕೃಷ್ಣ(26) ಹಾಗೂ ಪವಿತ್ರ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಪವಿತ್ರ ಪೋಷಕರು ಬೇರೊಂದು ಹುಡುಗನ ಜತೆ ಪವಿತ್ರಳ ಮದುವೆ ಮಾಡಲು ಮುಂದಾಗಿದ್ದಾರೆ. ಪೋಷಕರ ಆಯ್ಕೆಯನ್ನು ಪವಿತ್ರ ಸಹ ಒಪ್ಪಿಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ರಾಮಕೃಷ್ಣ ಪವಿತ್ರಳನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ಪವಿತ್ರ ಹಾಗೂ ರಾಮಕೃಷ್ಣ ಶಾಪಿಂಗ್‌ ಗೆ ತೆರಳಿದ್ದಾರೆ. ವಾಪಾಸಾಗುವ ವೇಳೆ ಆಟೋರಿಕ್ಷಾದಲ್ಲೇ ಪರಸ್ಪರ ಜಗಳವಾಡಿದ್ದಾರೆ. ಈ ವೇಳೆ ರಾಮಕೃಷ್ಣ ಶೇವಿಂಗ್‌ ಗೆ ಬಳಸುವ ಬ್ಲೇಡ್‌ನಿಂದ ಆಕೆಯ ಕತ್ತು ಸೀಳಿ, ಅಲ್ಲಿಂದ ಓಡಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದ ಪವಿತ್ರಳನ್ನು ಮಧುರೈ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಪವಿತ್ರ ಅಸುನೀಗಿದ್ದಾಳೆ. ಆಕೆ ಕುತ್ತಿಗೆಯಲ್ಲಿ ಆಳವಾದ ಹಾಗೂ ಹಲವಾರು ಬ್ಲೇಡಿನ ಗೀರು ಗಾಯಗಳಿದ್ದವು ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು. ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುವ ರಾಮಕೃಷ್ಣ ಕೊಲೆ ಮಾಡಿದ ಬಳಿಕ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...