alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯನ್ನೇ ಕೊಂದು ರುಂಡ ಹಿಡಿದು ಠಾಣೆಗೆ ಬಂದ ಮಗ

ತಮಿಳುನಾಡಿನ ಪುದುಕೊಟ್ಟೈ ಎಂಬಲ್ಲಿ 30 ವರ್ಷದ ವ್ಯಕ್ತಿಯೊಬ್ಬ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ಆಕೆಯ ರುಂಡವನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಾನೆ. ಆಸ್ತಿ ವಿಚಾರಕ್ಕೆ ತಾಯಿ ರಾಣಿ ಜೊತೆಗೆ ಆಗಾಗ ಆನಂದ್ ಜಗಳವಾಡುತ್ತಿದ್ದ.

ನಿನ್ನೆ ಬೆಳಗ್ಗೆ ಕೂಡ ಅಮ್ಮ-ಮಗನ ಮಧ್ಯೆ ಜಟಾಪಟಿ ನಡೆದಿದೆ. ಕೋಪದ ಭರದಲ್ಲಿ ಆನಂದ್ ತಾಯಿಯನ್ನು ಕೊಲೆ ಮಾಡಿದ್ದಾನೆ. ಹರಿತವಾದ ಆಯುಧದಿಂದ ಆಕೆಯ ಶಿರಚ್ಛೇದ ಮಾಡಿದ್ದಾನೆ. ನಂತರ ರುಂಡವನ್ನು ಹಿಡಿದುಕೊಂಡು ಕರಂಬಾಕುಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಕೊಲೆಯಾದ ರಾಣಿ ವಿರುದ್ಧ ಪತಿಯನ್ನೇ ಹತ್ಯೆ ಮಾಡಿದ ಆರೋಪವಿತ್ತು. ಆದ್ರೆ 10 ವರ್ಷಗಳ ಹಿಂದೆ ಆಕೆ ಖುಲಾಸೆಯಾಗಿದ್ದಳು. ಆರೋಪಿ ಆನಂದ್ ನನ್ನು ವಶಕ್ಕೆ ಪಡೆದಿರೋ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...