alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಮತ್ತೆ ಬಂತು ಆತ್ಮಹತ್ಯೆ ಗೇಮ್

ಭಾರತಕ್ಕೆ ಮತ್ತೆ ಬ್ಲೂ ವೇಲ್ ಗೇಮ್ ಕಾಲಿಟ್ಟಿದೆ. ತಮಿಳುನಾಡಿನಲ್ಲಿ ಬ್ಲೂ ವೇಲ್ ಗೇಮ್ ಗೆ ಇನ್ನೊಂದು ಬಲಿಯಾಗಿದೆ. 22 ವರ್ಷದ ಇಂಜಿನಿಯರ್ ಬ್ಲೂ ವೇಲ್ ಗೇಮ್ ಗೆ ಪ್ರಾಣ ಕಳೆದುಕೊಂಡಿದ್ದಾನೆ.

ಮಂಗಳವಾರ ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ ನೇಣಿಗೆ ಶರಣಾಗಿದ್ದಾನಂತೆ. ಬುಧವಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಡೈರಿ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರಂಭಿಕ ತನಿಖೆಯಲ್ಲಿ ಬ್ಲೂ ವೇಲ್ ಗೇಮ್ ಆತ್ಮಹತ್ಯೆಗೆ ಕಾರಣ ಎನ್ನಲಾಗ್ತಿದೆ.

2017ರಲ್ಲಿ ಬ್ಲೂ ವೇಲ್ ಗೇಮ್ ಭಾರತಕ್ಕೆ ಕಾಲಿಟ್ಟಿತ್ತು. 50 ದಿನಗಳ ಈ ಆಟದಲ್ಲಿ ಕೊನೆಗೆ ಆಟಗಾರ ಆತ್ಮಹತ್ಯೆ ಮಾಡಿಕೊಳ್ಳಬೇಕು. ಅನೇಕರು ಈ ಆಟಕ್ಕೆ ಬಲಿಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತ ಸರ್ಕಾರ, ಬ್ಲೂ ವೇಲ್ ಗೇಮ್ ಮೇಲೆ ನಿಯಂತ್ರಣ ಹೇರಲು ಸೂಕ್ತ ಕ್ರಮ ಕೈಗೊಂಡಿತ್ತು. ಆದ್ರೀಗ ಮತ್ತೆ ಬ್ಲೂ ವೇಲ್ ಗೇಮ್ ಒಬ್ಬನನ್ನು ಬಲಿ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...