alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುವಂತಿದೆ ಈ ನಟಿಯ ದಂಧೆ…!

ಕೊಯಂಬತ್ತೂರು: ಅನಿವಾಸಿ ಭಾರತೀಯರೊಬ್ಬರಿಗೆ ಮದುವೆಯಾಗುವುದಾಗಿ ವಂಚಿಸಿದ ಆರೋಪದ ಮೇಲೆ ನಟಿ ಹಾಗೂ ಆಕೆಯ ಕುಟುಂಬದವರನ್ನು ಪೊಲೀಸರು ಬಂಧಿಸಿದ್ದಾರೆ.

ತಮಿಳು ಚಿತ್ರ ನಟಿ ಪಿ. ಶ್ರುತಿ ಅಲಿಯಾಸ್ ಮೈಥಿಲಿ ವೆಂಕಟೇಶ್, ಆಕೆಯ ತಾಯಿ ಚಿತ್ರಾ ಅಲಿಯಾಸ್ ಅಮೃತಾ ವೆಂಕಟೇಶ್, ಸಹೋದರ ಪಿ. ಸುಭಾಶ್ ಮತ್ತು ಕೆ. ಪ್ರಸನ್ನ ವೆಂಕಟೇಶ್ ಅವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಿಡುಗಡೆಯಾಗದಿರುವ ‘ಆದಿ ಪೊನ್ನ ಆವನಿ’ ಚಿತ್ರದಲ್ಲಿ ನಟಿಸಿರುವ ಶ್ರುತಿ ಬೇರೆ ಹೆಸರಲ್ಲಿ ಮ್ಯಾಟ್ರಿಮೋನಿ ಸೈಟ್ ಗಳಲ್ಲಿ ನೋಂದಾಯಿಸಿಕೊಂಡಿದ್ದಾಳೆ. ಸೇಲಂ ಜಿಲ್ಲೆ ಎಡಪ್ಪಾಡಿ ಸಮೀಪದ ಕಟ್ಟುವಾಲವು ಮೂಲದ ಪ್ರಸ್ತುತ ಜರ್ಮನಿ ಆಟೋಮೊಬೈಲ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಜಿ. ಬಾಲಮುರುಗನ್ ಅವರನ್ನು ಪರಿಚಯಿಸಿಕೊಂಡಿದ್ದಾಳೆ.

ಪ್ರೀತಿಸುವ ಮತ್ತು ಮದುವೆಯಾಗುವ ನಾಟಕವಾಡಿದ ಶ್ರುತಿ ಬಾಲಮುರುಗನ್ ಅವರನ್ನು ವಂಚಿಸಿ 41 ಲಕ್ಷ ರೂ. ಹಣ ಪಡೆದುಕೊಂಡಿದ್ದಾಳೆ. ತನಗೆ ಬ್ರೈನ್ ಟ್ಯೂಮರ್ ಇದೆ, ತಾಯಿಗೆ ಹಾರ್ಟ್ ಪ್ರಾಬ್ಲಂ ಆಗಿದೆ ಎಂದು ಹೇಳಿ ಹಣ ಪಡೆದು ಕೈಕೊಟ್ಟಿದ್ದಾಳೆ.

ಈಕೆಯ ಫೋಟೋವನ್ನು ಬಾಲ ಮುರುಗನ್ ಸ್ನೇಹಿತರಿಗೆ ಕಳಿಸಿದಾಗ, ಚಿತ್ರ ನಟಿ ಶ್ರುತಿ ಎಂಬುದು ಗೊತ್ತಾಗಿದೆ. ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಶ್ರುತಿ ಮತ್ತು ಕುಟುಂಬದವರನ್ನು ಬಂಧಿಸಿದ್ದಾರೆ.

ಶ್ರುತಿ ಇದೇ ರೀತಿ ನಮಕ್ಕಲ್ ಜಿಲ್ಲೆಯ ಪರಮಾಥಿ ವೆಲ್ಲೂರ್ ನಲ್ಲಿ ಮತ್ತೊಬ್ಬರಿಗೆ ವಂಚಿಸಿದ್ದ ಬಗ್ಗೆ ಸಿ.ಸಿ.ಬಿ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಗೊತ್ತಾಗಿದೆ. ಶ್ರೀಮಂತ ಯುವಕರನ್ನು ಗುರುತಿಸಿ ಶ್ರುತಿ ಮತ್ತು ಆಕೆಯ ಕುಟುಂಬದವರು ವಂಚಿಸಿದ್ದಾರೆ.

ಕಡಲೂರು, ನಾಗಪಟ್ಟಣಂ ಮೊದಲಾದ ಕಡೆಗಳಲ್ಲಿ ಇನ್ನೂ ಹಲವರಿಗೆ ಶ್ರುತಿ ವಂಚಿಸಿದ್ದು, ತನಿಖೆ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...