alex Certify
ಕನ್ನಡ ದುನಿಯಾ       Mobile App
       

Kannada Duniya

ಸಂತಾನ ಪ್ರಾಪ್ತಿಗೆ ಆಸ್ಪತ್ರೆಗೆ ಬಂದವಳ ಮೇಲೆ ಅತ್ಯಾಚಾರವೆಸಗಿದ ಕಾಮುಕ ವೈದ್ಯ

ಗುಜರಾತಿನಲ್ಲಿ ವೈದ್ಯನೊಬ್ಬ ವೃತ್ತಿಗೆ ಕಳಂಕ ತರುವ ಕೆಲಸ ಮಾಡಿದ್ದಾನೆ. ಚಿಕಿತ್ಸೆಗೆಂದು ಬಂದ ರೋಗಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ನಂತ್ರ ಪೊಲೀಸರು ಕಾಮುಕ ವೈದ್ಯನನ್ನು ಬಂಧಿಸಿದ್ದಾರೆ.

ಘಟನೆ ಗುಜರಾತಿನ ಪ್ರಸಿದ್ಧ ಮೀ ಎಂಡ್ ಮಮ್ಮಿ ಆಸ್ಪತ್ರೆಯಲ್ಲಿ ನಡೆದಿದೆ. ಸಂತಾನ ಪ್ರಾಪ್ತಿಗೆ ಈ ಆಸ್ಪತ್ರೆ ಪ್ರಸಿದ್ಧಿ ಪಡೆದಿದೆ. ಮಕ್ಕಳಾಗದ ಮಹಿಳೆಯರು ಆಸೆ ಹೊತ್ತು ಆಸ್ಪತ್ರೆಗೆ ಬರ್ತಾರೆ. ಈ ಆಸ್ಪತ್ರೆಯಲ್ಲಿ ಟೆಸ್ಟ್ ಟ್ಯೂಬ್ ಬೇಬಿ ಸೌಲಭ್ಯವೂ ಇದೆ. ಆಸ್ಪತ್ರೆಗೆ ಬಂದಿದ್ದ ಪೀಡಿತ ಮಹಿಳೆ ಪ್ರಫುಲ್ ದೋಷಿ ಎಂಬ ವೈದ್ಯನನ್ನು ಭೇಟಿಯಾಗಿದ್ದಳು. ಡಾಕ್ಟರ್ ಚಿಕಿತ್ಸೆ ಶುರು ಮಾಡಿದ್ದರು.

ಕಳೆದ ಆರು ತಿಂಗಳಿಂದ ಮಹಿಳೆಗೆ ಚಿಕಿತ್ಸೆ ನಡೆಯುತ್ತಿತ್ತು. ಸೆಪ್ಟೆಂಬರ್ ನಾಲ್ಕರಂದೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾಳೆ. ಪತಿ ಹೊರಗೆ ಇದ್ದ ಎನ್ನಲಾಗಿದೆ. ನರ್ಸ್ ಳನ್ನೂ ಹೊರಗೆ ಕಳುಹಿಸಿದ ವೈದ್ಯ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ದೂರು ದಾಖಲಿಸಿಕೊಂಡು ಆರೋಪಿ ಬಂಧಿಸಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...