alex Certify
ಕನ್ನಡ ದುನಿಯಾ       Mobile App
       

Kannada Duniya

ಶುದ್ಧೀಕರಣದ ಹೆಸರಿನಲ್ಲಿ 11 ವರ್ಷ ಪಾಲಕರ ಮುಂದೆ ಮಗಳ ಅತ್ಯಾಚಾರ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೂಢನಂಬಿಕೆಗೆ ಸಂಬಂಧಿಸಿದ ಅವಮಾನಕರ ಘಟನೆ ನಡೆದಿದೆ. ತಾಯಿ-ತಂದೆ ಎದುರಲ್ಲೆ ಡೋಂಗಿ ಸನ್ಯಾಸಿಯೊಬ್ಬ ಅನೇಕ ವರ್ಷಗಳ ಕಾಲ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ತಾಂತ್ರಿಕ ಶುದ್ಧೀಕರಣದ ಹೆಸರಿನಲ್ಲಿ ಸನ್ಯಾಸಿ ಅತ್ಯಾಚಾರವೆಸಗಿದ್ದಾನೆ.

ನೇತಾಜಿ ಸುಭಾಷ್ ಪ್ಲೇಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ದೇವಿ ಶರ್ಮಾ ಹಾಗೂ ಆತನ ಪತ್ನಿ ಮತ್ತು ಸಹೋದರಿ ಕಪಟ ಸನ್ಯಾಸಿ ಮಾತಿಗೆ ತಲೆದೂಗಿದ್ದಾರೆ. ಕೆಲ ವರ್ಷಗಳ ಹಿಂದೆ ಈ ಕುಟುಂಬ ಸೋದರ ಸಂಬಂಧಿಯೊಬ್ಬರನ್ನು ಹತ್ಯೆ ಮಾಡಿತ್ತಂತೆ. ಆ ಭಯವನ್ನು ಹೋಗಲಾಡಿಸಲು 11 ವರ್ಷಗಳ ಹಿಂದೆ ದೇವಿ ಶರ್ಮಾ ಸನ್ಯಾಸಿಯೊಬ್ಬರನ್ನು ಮನೆಗೆ ಕರೆದಿದ್ದನಂತೆ.

11 ವರ್ಷಗಳ ಹಿಂದೆ ಮೊದಲ ಬಾರಿ ಮನೆಗೆ ಬಂದ ಸನ್ಯಾಸಿ ಪೂಜೆ ಮಾಡಿ ನಂತ್ರ 14 ವರ್ಷದ ಹುಡುಗಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದು ಶುದ್ಧೀಕರಣಕ್ಕೆಂದು ಮನೆಯವರ ಬಾಯಿ ಮುಚ್ಚಿಸಿದ್ದಾನೆ. 11 ವರ್ಷಗಳ ಕಾಲ ದೇವಿ ಶರ್ಮಾ ಮನೆಗೆ ಬಂದಾಗಲೆಲ್ಲ ಸನ್ಯಾಸಿ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ. ಈಗ ಯುವತಿ ತನ್ನ ನೋವನ್ನು ಪೊಲೀಸ್ ಮುಂದೆ ಹೇಳಿದ್ದಾಳೆ.

ಅನೇಕ ದಿನಗಳಿಂದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಮುಂದಾಗಿದ್ದಾಳೆ. ಆದ್ರೆ ಯಾರೂ ಈ ಬಗ್ಗೆ ದೂರು ದಾಖಲಿಸಿಕೊಳ್ಳಲಿಲ್ಲವಂತೆ. ಹೊಂದಾಣಿಕೆ ಮಾಡಿಕೊಳ್ಳುವಂತೆ ಸಲಹೆ ಕೂಡ ನೀಡಿದ್ದರು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...