alex Certify
ಕನ್ನಡ ದುನಿಯಾ       Mobile App
       

Kannada Duniya

ಓಡಿ ಹೋದ ಹುಡುಗಿಯರು ನೀಡಿದ್ರು ಶಾಕಿಂಗ್ ನ್ಯೂಸ್

ಬ್ಲೂ ವೇಲ್ ಗೇಮ್ ಟಾಸ್ಕ್ ಪೂರ್ಣಗೊಳಿಸಲು ಮನೆ ಬಿಟ್ಟು ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ದಂಗಾಗಿಸುವಂತಹ ವಿಷ್ಯಗಳನ್ನು ಹೇಳಿದ್ದಾರೆ. ಇಬ್ಬರು ಬಾಲಕಿಯರು ಆಗ್ರಾದ ಸೈನಿಕ ಸ್ಕೂಲಿನಲ್ಲಿ ಓದುತ್ತಿದ್ದಾರೆ. ಮಂಗಳವಾರ ರಾತ್ರಿ ಹೋಶಂಗಾಬಾದ್ ನಿಲ್ದಾಣದ ಬಳಿ ಪೊಲೀಸ್ ಕೈಗೆ ಸಿಕ್ಕಿದ್ದರು.

ಕೌನ್ಸಿಲಿಂಗ್ ವೇಳೆ ಸ್ಕೂಲ್ ಹಾಗೂ ಹಾಸ್ಟೆಲ್ ನಲ್ಲಿರುವ ಅನೇಕ ಮಕ್ಕಳು ಈ ಆಟವಾಡ್ತಿದ್ದಾರೆಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ಆರಂಭದಲ್ಲಿ ಆಟ ಖುಷಿ ನೀಡುತ್ತಿತ್ತು. ನಂತ್ರ ಆಟದಲ್ಲಿ ಆಸಕ್ತಿ ಹೆಚ್ಚಾಯ್ತು ಎಂದಿದ್ದಾರೆ. ಬಾಲಕಿಯರ ಬ್ಯಾಗ್ ನಲ್ಲಿ ಬಟ್ಟೆ, ಹಣ, ಮೊಬೈಲ್ ಜೊತೆ ಒಂದು ಲ್ಯಾಪ್ ಟಾಪ್ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೇಮ್ ಆಡ್ತಿದ್ದ ವಿದ್ಯಾರ್ಥಿನಿಯರು ಲ್ಯಾಪ್ ಟಾಪ್ ನಲ್ಲಿ ತಾವಿರುವ ಜಾಗವನ್ನು ಅಪ್ಡೇಟ್ ಮಾಡ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿನಿಯರು ತಮ್ಮ ಸ್ನೇಹಿತರಿಗೆ ಸೆಲ್ಫಿ ಕೂಡ ಕಳುಹಿಸಿದ್ದಾರೆ.

ಮಂಗಳವಾರವೇ ಅವರು ಆಗ್ರಾಕ್ಕೆ ವಾಪಸ್ ಹೋಗಬೇಕಿತ್ತು. ರಾತ್ರಿಯಾದ ಕಾರಣ ನಿಲ್ದಾಣದಲ್ಲಿಯೇ ತಂಗಿದ್ದರಂತೆ. ಬಾಲಕಿಯರನ್ನು ರಕ್ಷಣೆ ಮಾಡಿದ ಸ್ಥಳೀಯ ಪೊಲೀಸರು ಕೌನ್ಸಿಲಿಂಗ್ ನಡೆಸಿದ ನಂತ್ರ ಬಾಲಕಿಯರನ್ನು ಕುಟುಂಬಸ್ಥರಿಗೆ ನೀಡಿದ್ದಾರೆ. ಹಾಗೆ ಬಾಲಕಿಯರು ಓದುತ್ತಿರುವ ಸೈನಿಕ ಶಾಲೆಗೆ ಈ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...