alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಡೈರಿಯಲ್ಲಿತ್ತು ಇಂಥ ವಿಷ್ಯ

ಪಂಚಕುಲಾದಲ್ಲಿ 17 ವರ್ಷದ ಹುಡುಗನೊಬ್ಬ ಬ್ಲೂ ವೇಲ್ ಗೇಮ್ ಗೆ ಬಲಿಯಾಗಿದ್ದಾನೆ. 10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಡೈರಿ ನೋಡಿದ ಕುಟುಂಬಸ್ಥರು ದಂಗಾಗಿದ್ದಾರೆ. ಡೈರಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನವನ್ನು ಬರೆದಿದ್ದ. ಮೊಬೈಲ್ ನಲ್ಲಿ ಬ್ಲೂ ವೇಲ್ ಗೇಮ್ ಸಿಕ್ಕಿದೆ.

ಡಿಎವಿ ಸ್ಕೂಲಿನ ಸೆಕ್ಟರ್ -8ರಲ್ಲಿ ಓದುತ್ತಿರುವ 10ನೇ ಕ್ಲಾಸಿನ ಕರಣ್ ಠಾಕೂರ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈ ಆಟದಿಂದ ಹೊರ ಬರಲು ಕರಣ್ ಪ್ರಯತ್ನಿಸಿದ್ದನಂತೆ. ಡಾಕ್ಟರ್ ಬಳಿಯೂ ಹೋಗಿದ್ದರಂತೆ. ಆದ್ರೆ ವೈದ್ಯರು ಸಿಕ್ಕಿರಲಿಲ್ಲವಂತೆ. ಕಾಯೋದು ಬೇಡ. ನಾನು ಚೆನ್ನಾಗಿದ್ದೇನೆಂದು ಪಾಲಕರನ್ನು ಮನೆಗೆ ಕರೆದುಕೊಂಡು ಬಂದಿದ್ದನಂತೆ.

ಬ್ಲೂ ವೇಲ್ ಗೇಮ್ ಆಡ್ತಿದ್ದ ಮಗನ ಭಾವನೆಗಳೆಲ್ಲ ಸತ್ತು ಹೋಗಿದ್ದವಂತೆ. ತನ್ನದೆ ಭಾವನೆಯಲ್ಲಿ ಸುತ್ತುತ್ತಿದ್ದನಂತೆ. ರಾತ್ರಿ ಆತ ಬ್ಲೂ ವೇಲ್ ಗೇಮ್ ಆಡ್ತಿದ್ದ. ಕೇಳಿದ್ರೆ ಓದುತ್ತಿದ್ದೇನೆಂದು ಸುಳ್ಳು ಹೇಳುತ್ತಿದ್ದ. ಮಗ ಸತ್ತ ಮೇಲೆ ಸತ್ಯ ಗೊತ್ತಾಯ್ತು ಎನ್ನುತ್ತಾರೆ ಪಾಲಕರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...