alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿ ನಿರಾಕರಿಸಿದ್ದಕ್ಕೆ ಇಂಜೆಕ್ಷನ್

Crime-455

ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಹೋಗುವುದೇ ಕಷ್ಟವಾಗಿದೆ. ಬಹುತೇಕ ಎಲ್ಲಾ ಕಡೆಗಳಲ್ಲಿ ಬೀದಿ ಕಾಮಣ್ಣರ ಹಾವಳಿ ಜಾಸ್ತಿಯಾಗಿದ್ದು, ಶಾಲೆಗೆ ಹೋಗಲು ಬಾಲಕಿಯರು ಹಿಂದೇಟು ಹಾಕುವಂತಾಗಿದೆ. ಹೀಗೆ ಶಾಲಾ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ ಪ್ರಕರಣ ಇಲ್ಲಿದೆ ನೋಡಿ.

ದಿನಾಲು ಶಾಲೆಗೆ ಹೋಗಿ ಬರುತ್ತಿದ್ದ ಬಾಲಕಿಯೊಬ್ಬಳಿಗೆ ಯುವಕ ತನ್ನನ್ನು ಪ್ರೀತಿಸುವಂತೆ ಪೀಡಿಸಿದ್ದು, ಆಕೆ ನಿರಾಕರಿಸಿದಾಗ, ಇಂಜೆಕ್ಷನ್ ಚುಚ್ಚಿದ್ದಾನೆ. ಶ್ರೀರಂಗಪಟ್ಟಣ ಕೆ ಆರ್ ಎಸ್ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುವ ಬಾಲಕಿಯೊಬ್ಬಳಿಗೆ ಮನು ಎಂಬ ಯುವಕ ಪ್ರೀತಿಸುವಂತೆ ಪೀಡಿಸುತ್ತಿದ್ದು, ಬಾಲಕಿ ನಿರಾಕರಿಸಿದ್ದಾಳೆ. ಆಗ, ಪ್ರೀತಿ ನಿರಾಕರಿಸಿದ ಬಾಲಕಿಗೆ ಪ್ರಜ್ಞೆ ತಪ್ಪುವ ಇಂಜೆಕ್ಷನ್ ಚುಚ್ಚಿ ಪರಾರಿಯಾಗಿದ್ದಾನೆ ಮನು. ಬಾಲಕಿ ಸ್ನೇಹಿತೆಯರು, ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.

ಶಾಲೆ ಮುಗಿಸಿಕೊಂಡು ಸಂಜೆ ಮನೆಗೆ ಹೊರಟಿದ್ದ ತನಗೆ ಅಡ್ಡಗಟ್ಟಿದ ಮನು ಪ್ರೀತಿಸುವಂತೆ ಬೆದರಿಸಿದ್ದಾನೆ. ಅವನೊಂದಿಗೆ ಇನ್ನಿಬ್ಬರು ಇದ್ದರು. ನಾನು ನಿರಾಕರಿಸಿ ಅಲ್ಲಿಂದ ಹೊರಟೆ. ಆಗ ಬೆನ್ನಿಗೆ ಇಂಜೆಕ್ಷನ್ ಚುಚ್ಚಿ ಪರಾರಿಯಾದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕಿ ತಿಳಿಸಿದ್ದಾಳೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...