alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲು ಮಾಡುವಾಗ ಸಿಕ್ಕಿಬಿದ್ದ ವಿದ್ಯಾರ್ಥಿ ಸಾವಿಗೆ ಶರಣು

ಕಾಪಿ ಹೊಡೆದು ಸಿಕ್ಕಿಬಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ಎಂಐಟಿ ನರ್ಸಿಂಗ್ ಕಾಲೇಜಿನಲ್ಲಿ ಮಂಗಳವಾರ ನಡೆದ ಬಿಎಸ್ಸಿ ಪರೀಕ್ಷೆ ವೇಳೆ 19 ವರ್ಷದ ಸಚಿನ್ ವಾಘ್ ಎಂಬ ವಿದ್ಯಾರ್ಥಿ ಕಾಪಿ ಹೊಡೆದು ಸಿಕ್ಕಿಬಿದ್ದಿದ್ದ. ಪ್ರಿನ್ಸಿಪಾಲ್ ಹೆಲೆನ್ ರಾಣಿ ಆತನ ಪೋಷಕರನ್ನು ಕರೆದುಕೊಂಡು ಬರಬೇಕೆಂದು ಸೂಚಿಸಿದ್ದರು.

ಇದರಿಂದ ಭಯಗೊಂಡ ವಿದ್ಯಾರ್ಥಿ ಸಚಿನ್ ಕಾಲೇಜಿನ ನಾಲ್ಕನೇ ಮಹಡಿಯಿಂದ ಕೆಳಗೆ ಹಾರಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಗಂಭೀರ ಗಾಯಗಳಾಗಿದ್ದರಿಂದ ಮಾರನೇ ದಿನ ಮೃತಪಟ್ಟಿದ್ದಾನೆ.

ವಿದ್ಯಾರ್ಥಿಯ ಪೋಷಕರು ಪ್ರಾಂಶುಪಾಲರ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಅವರನ್ನು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...