alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ ಮಗಳ ನಗ್ನ ಡಾನ್ಸ್ ವಿಡಿಯೋವನ್ನು ತಾಯಿಗೆ ಕಳುಹಿಸಿದ…!

ಗುಜರಾತಿನ ಜಾಮ್ನಗರದಲ್ಲಿ ಮಲ ತಂದೆ ಮಾಡಿದ ಕೃತ್ಯ, ಸಂಬಂಧಕ್ಕೆ ಕಳಂಕ ತರುವಂತಹದೊಂದೇ ಅಲ್ಲ ಮಾನವೀಯತೆ ಸತ್ತಿದೆ ಎನ್ನುವುದಕ್ಕೆ ಉತ್ತಮ ನಿದರ್ಶನ. ಮಾನಸಿಕ ಹಾಗೂ ದೈಹಿಕ ಹಿಂಸೆ ನಡೆಸಿ ಬಾಲಕಿ ಕೊಲೆ ಮಾಡಿದ ಆರೋಪದ ಮೇಲೆ ಮಲ ತಂದೆ ಜೊತೆ ಆತನ ಸಹೋದರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಒಂಭತ್ತು ವರ್ಷದ ಬಾಲಕಿ ತಾಯಿ ಕೂಡ ಪತಿಯ ದೌರ್ಜನ್ಯಕ್ಕೆ ನೊಂದಿದ್ದಳು. ಹಾಗಾಗಿ ಮಗಳನ್ನು ವಿಕಾಸ ಗೃಹದಲ್ಲಿ ಬಿಟ್ಟು ಕರ್ನಾಟಕಕ್ಕೆ ಬಂದಿದ್ದಳು. ತಾಯಿ ಹೆಸರಿನಲ್ಲಿ ಆಸ್ತಿಯಿತ್ತು. ಮಗಳಿಗೆ ಹಿಂಸೆ ನೀಡಿ ಆಸ್ತಿ ಕಬಳಿಸುವ ಪ್ಲಾನ್ ಮಾಡಿದ್ದ ಮಲ ತಂದೆ.

ವಿಕಾಸ ಗೃಹದಿಂದ ಬಾಲಕಿಯನ್ನು ಮನೆಗೆ ಕರೆ ತಂದಿದ್ದ ಮಲ ತಂದೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡ್ತಿದ್ದ. ಆಕೆಯನ್ನು ನಗ್ನಗೊಳಿಸಿ ನೃತ್ಯ ಮಾಡಿಸ್ತಿದ್ದ. ಅದ್ರ ವಿಡಿಯೋವನ್ನು ತಾಯಿಗೆ ಕಳುಹಿಸುತ್ತಿದ್ದ. ಚಿತ್ರಹಿಂಸೆ ನೀಡಿ ಬಾಲಕಿಯನ್ನು ಮಲ ತಂದೆ ಕೊಲೆ ಮಾಡಿದ್ದಾನೆ. ಇದಕ್ಕೆ ಸಹೋದರಿ ಬೆಂಬಲ ನೀಡಿದ್ದಾಳೆ. ತಪ್ಪನ್ನು ಆರೋಪಿಗಳು ಒಪ್ಪಿಕೊಂಡಿದ್ದು, ಕಂಬಿ ಹಿಂದೆ ಸೇರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...