alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿಯ ಬಟ್ಟೆ ಹರಿದ ಶಾಸಕನ ಸೋದರಳಿಯ ಅರೆಸ್ಟ್

arrest3ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಮಾಧ್ಯಮಗಳಲ್ಲಿ ಪದೇ ಪದೇ ವರದಿಯಾಗುತ್ತಲೇ ಇರುತ್ತವೆ. ಈಗ ಚುನಾಯಿತ ಪ್ರತಿನಿಧಿಯೊಬ್ಬನ ಸೋದರಳಿಯನೇ ಮಾರ್ಕೆಟ್ ನಲ್ಲಿ ಯುವತಿಯ ಬಟ್ಟೆ ಹರಿದು ಅರೆಸ್ಟ್ ಆಗಿದ್ದಾನೆ.

ಸಮಾಜವಾದಿ ಪಕ್ಷದ ಶಾಸಕ ಜಾಹೀದ ಬೇಗ್ ಅವರ ಸೋದರಳಿಯ ಶಾದಬ್ ಬೇಗ್, ಸ್ಕೂಟಿಯಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಯುವತಿಯನ್ನು ತನ್ನ ಸ್ನೇಹಿತರ ಜೊತೆ ಸೇರಿ ಅಡ್ಡಗಟ್ಟಿದ್ದಾನೆ. ಬಳಿಕ ಆಕೆಯ ಮೇಲೆ ಹಲ್ಲೆ ಮಾಡಿದ್ದಲ್ಲದೇ ಬಟ್ಟೆಯನ್ನು ಹರಿದು ಹಾಕಿದ್ದಾನೆ.

ಶಾದಬ್ ಮತ್ತಾತನ ಸ್ನೇಹಿತರ ವಿರುದ್ದ ಬದೌಹಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲರನ್ನೂ ಬಂಧಿಸಲಾಗಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಜಾಹೀದ್ ಬೇಗ್, ತಮ್ಮ ಹೆಸರನ್ನು ವಿನಾಕಾರಣ ಈ ಪ್ರಕರಣದಲ್ಲಿ ಎಳೆದು ತರಲಾಗುತ್ತಿದೆ. ಆರೋಪಿಗಳ ವಿರುದ್ದ ಪೊಲೀಸರು ಕಾನೂನುರೀತ್ಯಾ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...