alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಧಿ ಕದ್ದ ಬಾಲಕನೊಂದಿಗೆ ಅಮಾನವೀಯ ವರ್ತನೆ

balaka up

ಉತ್ತರ ಪ್ರದೇಶದಲ್ಲಿ ಕಾನೂನು ವ್ಯವಸ್ಥೆ ಕುಸಿದಿದ್ದು, ಚಿಕ್ಕ ವಿಷಯಗಳಿಗೂ ಜನ ಕಾನೂನನ್ನು ಕೈಗೆತ್ತಿಕೊಂಡು, ಅಪರಾಧ ಕೃತ್ಯಗಳನ್ನು ನಡೆಸುತ್ತಾರೆ. ಅದರಲ್ಲಿಯೂ, ಕೆಲವರು ದರ್ಪದಿಂದ ಹೇಗೆಲ್ಲಾ ವರ್ತಿಸುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ನಿದರ್ಶನ.

ಬಾಲಕನೊಬ್ಬ ಪಕ್ಕದ ಮನೆಯಲ್ಲಿ ಗೋಧಿ ಕದ್ದಿದ್ದಾನೆ ಎಂದು ಆರೋಪಿಸಿ ಆತನಿಗೆ ಮೂತ್ರ ಕುಡಿಸಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಸಿರೌಲಿ ಎಂಬ ಗ್ರಾಮದಲ್ಲಿ ನಡೆದಿದೆ. 13 ವರ್ಷದ ಬಾಲಕ ಸುನಿಲ್ ಎಂಬಾತ ಪಕ್ಕದ ಮನೆಯ ಗಜೇಂದ್ರ ಗಾಂಗ್ವಾರ್ ಎಂಬುವವನ ಮನೆಯಲ್ಲಿ 30 ಕೆಜಿ ಗೋಧಿಯನ್ನು ಕಳವು ಮಾಡಿದ್ದ ಎನ್ನಲಾಗಿದೆ. ಈ ಆರೋಪದ ಮೇಲೆ ಸುನಿಲ್ ನನ್ನು ಹಿಡಿದು ಥಳಿಸಲಾಗಿದ್ದು, ಬಿಡಿಸಲು ಬಂದಿದ್ದ ಆತನ ಸಹೋದರನ ಮೇಲೂ ಹಲ್ಲೆ ನಡೆಸಲಾಗಿದೆ.

ಸುನಿಲ್ ಎಷ್ಟ ಬೇಡಿಕೊಂಡರೂ, ಕೇಳದೇ ಕರುಣೆ ತೋರದ ದುರುಳರು ರಾಕ್ಷಸರಂತೆ ವರ್ತಿಸಿದ್ದಲ್ಲದೇ, ಬಾಲಕನನ್ನು ಥಳಿಸಿ, ಮೂತ್ರ ಕುಡಿಸಿದ್ದಾರೆ. ಹಲ್ಲೆಗೊಳಗಾದ ಬಾಲಕನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...