alex Certify
ಕನ್ನಡ ದುನಿಯಾ       Mobile App
       

Kannada Duniya

18 ತಿಂಗಳುಗಳ ಬಳಿಕ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಯ್ತು ಮಗುವಿನ ಶವ

18 ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ ಮಗುವಿನ ಶವವೊಂದು ಮರದ ಪೆಟ್ಟಿಗೆಯಲ್ಲಿ ಪತ್ತೆಯಾದ ಘಟನೆ ಗಾಜಿಯಾಬಾದ್ ನ ಸಾಯಿಬಾಬಾದ್ ಗರಿಮಾ ಗಾರ್ಡನ್ ನಲ್ಲಿ ನಡೆದಿದೆ.

2016ರ ಡಿಸೆಂಬರ್ 1ರಂದು ಗರಿಮಾ ಗಾರ್ಡನ್ ನಿವಾಸಿ ಮಹಮ್ಮದ್ ಝೈದ್ ಎಂಬವರ 4 ವರ್ಷದ ಪುತ್ರ ನಾಪತ್ತೆಯಾಗಿದ್ದ. ಇದಾದ ಕೆಲ ದಿನಗಳ ಬಳಿಕ ವ್ಯಕ್ತಿಯೊಬ್ಬ ಕರೆ ಮಾಡಿ 8 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದರ ಮಧ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದರಾದರೂ ಮಗುವಿನ ಪತ್ತೆಯಾಗಿರಲಿಲ್ಲ.

ಮಗುವಿನ ಆಸೆಯನ್ನೇ ಮಹಮ್ಮದ್ ಕುಟುಂಬ ಕೈಬಿಟ್ಟಿತ್ತು. ಇದರ ಮಧ್ಯೆ ಭಾನುವಾರದಂದು ಕ್ರಿಕೆಟ್ ಆಡುತ್ತಿದ್ದ ಕೆಲ ಮಕ್ಕಳು ಬಾಲ್ ಮನೆ ಮೇಲೆ ಹೋಗಿದೆ ಎಂದು ಮೇಲೆ ಹತ್ತಿದ್ದಾರೆ. ಈ ವೇಳೆ ಮರದ ಪೆಟ್ಟಿಗೆಯೊಂದರಲ್ಲಿ ಅವರುಗಳಿಗೆ ಅಸ್ಥಿಪಂಜರವೊಂದು ಕಂಡುಬಂದಿದೆ. ಇದರಿಂದ ಬೆದರಿದ ಮಕ್ಕಳು ಪೋಷಕರಿಗೆ ವಿಷಯ ತಿಳಿಸಿದ್ದು, ಮಹಮ್ಮದ್ ಕೂಡ ಆಗಮಿಸಿದ್ದಾರೆ.

ಪೆಟ್ಟಿಗೆಯಲ್ಲಿದ್ದ ಬಟ್ಟೆ ಕಂಡು ಇದು ತಮ್ಮ ಮಗನದ್ದೇ ಎಂದು ಅವರು ಗುರುತಿಸಿದ್ದಾರೆ. ಪೊಲೀಸರು ಇದೀಗ ಅಸ್ಥಿಪಂಜರವನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದು, ಮಗು ನಾಪತ್ತೆ ಪ್ರಕರಣವನ್ನು ಪುನಃ ತನಿಖೆ ನಡೆಸಲು ಮುಂದಾಗಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಮಹಮ್ಮದ್ ವಾಸವಾಗಿದ್ದ ಪಕ್ಕದ ಕಟ್ಟಡದಲ್ಲಿಯೇ ಈ ಅಸ್ಥಿಪಂಜರ ಪತ್ತೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...