alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 8 ನಿಮಿಷಗಳಲ್ಲಿ ಲೂಟಿಯಾಗಿತ್ತು 2 ಎಟಿಎಂ

six-men-loot-rs-30-lakh-from-two-atms-in-just-eight-short-minutes-cops-hunt-them-downಆರು ಮಂದಿ ದರೋಡೆಕೋರರ ತಂಡ ಹಿಮಾಚಲ ಪ್ರದೇಶದಲ್ಲಿ ಕೇವಲ 8 ನಿಮಿಷಗಳಲ್ಲಿ ಎರಡು ಎಟಿಎಂ ಗಳಲ್ಲಿ ಲೂಟಿ ಮಾಡಿದ್ದು, 30 ಲಕ್ಷ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದರು. ಈ ಪೈಕಿ ಒಬ್ಬ ಆರೋಪಿಯನ್ನು ಬಂಧಿಸಿರುವ ಪೊಲೀಸರು 5 ಲಕ್ಷ ರೂ. ನಗದು ಹಾಗೂ ಇಂಡಿಗೊ ಕಾರ್ ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್ 30 ರಂದು ಕಂಗ್ರಾ ಜಿಲ್ಲೆಯ ಜ್ವಾಲಾಮುಖಿ ಹಾಗೂ ಹರಿಪುರ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಪಂಜಾಬ್ ಮೂಲದ ಆರು ಮಂದಿಯ ತಂಡ ಮೊದಲಿಗೆ ಎಟಿಎಂಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ಕ್ಯಾಮರಾಗಳಿಗೆ ಬಣ್ಣ ಸ್ಪ್ರೇ ಮಾಡಿದ್ದರು. ಬಳಿಕ ಎಟಿಎಂ ಒಡೆದು ಹಣ ದೋಚಿದ್ದರು.

ಎರಡೂ ಎಟಿಎಂ ಗಳಲ್ಲಿ ಕಾವಲುಗಾರರಿರಲಿಲ್ಲವೆನ್ನಲಾಗಿದ್ದು, ದರೋಡೆಕೋರರಿಗೆ ಸಹಕಾರಿಯಾಗಿತ್ತು. ಆರೋಪಿಗಳು ಡ್ರಗ್ ಅಡಿಕ್ಟ್ ಗಳೆಂದು ಹೇಳಲಾಗಿದ್ದು, ಪಂಜಾಬ್ ಪೊಲೀಸರ ಸಹಕಾರದೊಂದಿಗೆ ಮಿಕ್ಕ ಆರೋಪಿಗಳನ್ನು ಬಂಧಿಸುವುದಾಗಿ ಹಿಮಾಚಲ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...