alex Certify
ಕನ್ನಡ ದುನಿಯಾ       Mobile App
       

Kannada Duniya

ಪೂರ್ವಾಪರ ವಿಚಾರಿಸದೆ ಹೊಡೆದು ಕೊಂದ್ರು

ಬಿಹಾರದಲ್ಲಿ ಮತ್ತೆ ಸಾರ್ವಜನಿಕರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೆ. ಪೂರ್ವಾಪರ ವಿಚಾರಣೆ ಮಾಡದೆ ಯುವಕನೊಬ್ಬನನ್ನು ಸಾರ್ವಜನಿಕರು ಹೊಡೆದು ಕೊಂದಿದ್ದಾರೆ. ಯುವಕ ಮನೆಗೆ ವಸ್ತುಗಳನ್ನು ತರಲು ಸೀತಾಮಂಡಿಗೆ ಹೋಗ್ತಿದ್ದನಂತೆ. ಘಟನೆಗೆ ಪೊಲೀಸ್ ಉದಾಸೀನವೂ ಕಾರಣ ಎನ್ನಲಾಗ್ತಿದೆ. ಘಟನೆ ನಂತ್ರ ಪೊಲೀಸರು 150 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಿಂಗಹರಿಯಾ ಗ್ರಾಮದ ಭೂಷಣ್ ಕುಮಾರ್ ಝಾ ಮಗ ರೂಪೇಶ್ ಝಾ ಮೃತ ಯುವಕ. ರೂಪೇಶ್ ತನ್ನ ಸ್ನೇಹಿತರ ಜೊತೆ ವಸ್ತುಗಳನ್ನು ತರಲು ಹೋಗಿದ್ದನಂತೆ. ಈ ವೇಳೆ ಪಿಕ್ ಅಪ್ ವಾಹನ ಚಾಲಕನ ಜೊತೆ ಗಲಾಟೆ ಶುರುವಾಗಿದೆ. ಪಿಕ್ ಅಪ್ ಚಾಲಕ ಕೂಗಿಕೊಂಡಿದ್ದಾನೆ. ಅಲ್ಲಿಗೆ ಬಂದ ಜನರು ವಿಚಾರ ಮಾಡದೆ ರೂಪೇಶನಿಗೆ ಹೊಡೆಯಲು ಶುರು ಮಾಡಿದ್ದಾರೆ.

ಕೋಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ವಿಷ್ಯ ತಿಳಿದ ಕುಟುಂಬಸ್ಥರು ಮಗನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲ ನೀಡಲಿಲ್ಲ. ಅಂತ್ಯಸಂಸ್ಕಾರ ನಡೆದ ನಂತ್ರ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆ ನಡೆದಿಲ್ಲ. ರೂಪೇಶ್ ಪಿಕ್ ಅಪ್ ವಾಹನದಲ್ಲಿದ್ದ ವಸ್ತುಗಳನ್ನು ಕದಿಯಲು ಮುಂದಾಗಿದ್ದ ಎಂಬುದು ಸಾರ್ವಜನಿಕರ ಹೇಳಿಕೆ. ನ್ಯಾಯ ಕೊಡಿಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...