alex Certify
ಕನ್ನಡ ದುನಿಯಾ       Mobile App
       

Kannada Duniya

ತಂಗಿ ಗಂಡನೊಂದಿಗೆ ಅಕ್ಕನ ಸರಸ

(Adam Milner/CU Independent Illustration)

ಮೈಸೂರು: ಅಕ್ಕ ತಂಗಿಯರು ಸಾಮಾನ್ಯವಾಗಿ ಅನ್ಯೋನ್ಯವಾಗಿ ಇರುತ್ತಾರೆ. ಆದರೆ, ಅಕ್ಕನ ಮೇಲಿನ ದ್ವೇಷದಿಂದ ತಂಗಿ ಏನು ಮಾಡಿದ್ದಾಳೆ ಗೊತ್ತಾ? ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಕ್ಕನನ್ನೇ ತಂಗಿ ಕೊಲೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ವಾಜಮಂಗಲ ಎಂಬಲ್ಲಿ ಈ ಘಟನೆ ನಡೆದಿದೆ. ಸುಮಾರು 40 ವರ್ಷ ವಯಸ್ಸಿನ ಮಹಿಳೆಯನ್ನು ಆಕೆಯೇ ಸಹೋದರಿಯೇ ಕೊಲೆ ಮಾಡಿದ್ದಾಳೆ. ಈ ಹಿಂದೆಯೇ ಮದುವೆಯಾಗಿದ್ದ ಮಹಿಳೆ ಕೆಲವು ವರ್ಷಗಳಿಂದ ಗಂಡನನ್ನು ಬಿಟ್ಟು ಬಂದಿದ್ದಳು. ಆಕೆ, ಮನೆಗೆ ಬಂದು ಹೋಗುತ್ತಿದ್ದ ತನ್ನ ತಂಗಿಯ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳೆನ್ನಲಾಗಿದೆ. ಈ ವಿಷಯ ಗೊತ್ತಾಗಿ ತಂಗಿ ಹಲವು ಬಾರಿ ಬುದ್ಧಿ ಹೇಳಿದ್ದಾಳೆ.

ಆದರೆ, ತಂಗಿಯ ಮಾತನ್ನು ನಿರ್ಲಕ್ಷಿಸಿ ಆಕೆಯ ಗಂಡನೊಂಡಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದಾಳೆ. ಕೊನೆಗೆ ಆಕ್ರೋಶಗೊಂಡ ತಂಗಿಯೇ ಅಕ್ಕನನ್ನು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...