alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಣೆಯಲ್ಲಿ ಬಂಧಿಯಾದ ಅಕ್ಕ-ತಮ್ಮ: ಕಾರಣ ಕೇಳಿ ದಂಗಾದ ಜನ

ಹರಿದ್ವಾರದಲ್ಲಿ ಸಹೋದರ- ಸಹೋದರಿ ಮನೆಯನ್ನೇ ಜೈಲು ಮಾಡಿಕೊಂಡು ವಾಸವಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಸಹೋದರಿ ಕಳೆದ ನಾಲ್ಕು ವರ್ಷಗಳಿಂದ ಮನೆಯ ರೂಮಿನಲ್ಲಿ ಬಂಧಿಯಾಗಿದ್ದಳು. ಸಹೋದರ ಒಂದುವರೆ ವರ್ಷದಿಂದ ಮತ್ತೊಂದು ರೂಮಿನಲ್ಲಿ ಬಂಧಿಯಾಗಿದ್ದ. ಹೆತ್ತವರು ಹೇಳಿದ್ರೂ ಹೊರಗೆ ಬರದ ಇವರನ್ನು ಪೊಲೀಸರು ಮನೆಯಿಂದ ಹೊರಗೆ ಕರೆತಂದಿದ್ದಾರೆ.

ಪಂಚವಟಿ ಕಾಲೋನಿಯಲ್ಲಿ ವಾಸವಾಗಿರುವ ಹರೀಶ್ ಶರ್ಮಾ ಮನೆಯಲ್ಲಿ ಮಕ್ಕಳಿಬ್ಬರು ತಾವೇ ಬಂಧಿಯಾಗಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಇಂಜಿನಿಯರ್ ಆಗಿರುವ ಹರೀಶ್ ಪತ್ನಿ ಗೃಹಿಣಿ. ಅವರಿಗೆ ಇಬ್ಬರು ಮಕ್ಕಳು. ಅದಿತಿ ಹಾಗೂ ಆದಿತ್ಯ. ಅದಿತಿ 2013ರಲ್ಲಿ 10ನೇ ತರಗತಿ ಓದುತ್ತಿದ್ದಳು. ಈ ವೇಳೆ ಓದಿನ ವಿಚಾರಕ್ಕೆ ನಡೆದ ಸಣ್ಣ ಗಲಾಟೆಯಿಂದ ಮುನಿಸಿಕೊಂಡ ಅದಿತಿ 2013ರಲ್ಲಿ ಮನೆಯ ರೂಂ ಸೇರಿದ್ದಾಳೆ. ಎಷ್ಟು ಹೇಳಿದ್ರೂ ಹೊರಗೆ ಬರಲಿಲ್ಲ. ಬೇಕೆನಿಸಿದಾಗ ತನಗಿಷ್ಟವಾಗುವ ಆಹಾರವನ್ನು ಕೇಳಿ ಮಾಡಿಸಿಕೊಳ್ಳುತ್ತಿದ್ದ ಅದಿತಿ ಪೊಲೀಸರ ಸತತ ಪ್ರಯತ್ನದ ನಂತ್ರ ಕೋಣೆಯಿಂದ ಹೊರಗೆ ಬಂದಿದ್ದಾಳೆ.

ಇನ್ನು ಓದಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಗ ಆದಿತ್ಯ ಕೂಡ ರೂಂ ಸೇರಿದ್ದ. ರೂಂ ಸೇರಿದ್ದರೂ ಇಬ್ಬರ ಬೇಡಿಕೆಗಳು ಈಡೇರುತ್ತಿದ್ದವು. ಹೊಟ್ಟೆ ತುಂಬಾ ಇಷ್ಟದ ಆಹಾರ ಸೇವನೆ ಮಾಡ್ತಿದ್ದರು. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮೊದಲು ಪಾಲಕರು ಇದಕ್ಕೆ ವಿರೋಧ ಮಾಡಿದ್ರು. ಸತತ ನಾಲ್ಕು ಗಂಟೆಗಳ ಕಾಲ ಸಹೋದರ-ಸಹೋದರಿ ಜೊತೆ ಮಾತುಕತೆ ನಡೆಸಿದ ಪೊಲೀಸರು ಮಕ್ಕಳಿಗೆ ಓದಿನ ವಿಷ್ಯವಾಗಿ ಹಿಂಸೆ ನೀಡುವುದಿಲ್ಲವೆಂದು ಪಾಲಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...