alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಮೇಲೆ ಸ್ನೇಹಿತನ ರೇಪ್, ಗಂಡನ ಸಾಥ್ !

rape ap 30

ಕೋಝಿಕ್ಕೋಡ್: ಮಕ್ಕಳಾಗದ ಕಾರಣಕ್ಕೆ ಪತ್ನಿಯ ಮೇಲೆ ಅತ್ಯಾಚಾರ ಎಸಗಿ, ಗರ್ಭಿಣಿ ಮಾಡುವಂತೆ ಗಂಡನೇ, ಗೆಳೆಯನಿಗೆ ಹುರಿದುಂಬಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಈ ದಂಪತಿಗೆ ಮದುವೆಯಾಗಿ ವರ್ಷಗಳೇ ಕಳೆದಿದ್ದರೂ, ಮಕ್ಕಳಾಗಿರಲಿಲ್ಲ.

ಕೋಝಿಕ್ಕೋಡ್ ಇರಾಣಿಪಾಲಂನಲ್ಲಿರುವ ಖಾಸಗಿ ಆಸ್ಪತ್ರೆಗೆ ಬಂದು ಪತಿ, ಪತ್ನಿ ಪರೀಕ್ಷೆ ಮಾಡಿಸಿದ್ದು, ಪತಿ ನಪುಂಸಕ ಎಂಬುದು ಗೊತ್ತಾಗಿದೆ. ಕೊನೆಗೆ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿ ಮಾಡಬೇಕೆಂದು ಗೆಳೆಯನಿಗೆ ಹೇಳಿದ್ದಾನೆ. ಪತ್ನಿ ಒಪ್ಪದಿದ್ದರೆ, ಆಕೆಯ ಮೇಲೆ ಅತ್ಯಾಚಾರ ಎಸಗುವಂತೆ ತಿಳಿಸಿದ್ದಾನೆ. ಈತನ ಸೂಚನೆಯಂತೆ ಮನೆಗೆ ಬಂದ ಗೆಳೆಯ, ಪತ್ನಿಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದು, ಆಕೆ ತೀವ್ರವಾಗಿ ಪ್ರತಿಭಟಿಸಿದ್ದಾಳೆ.

ಗಂಡನೇ ಆಕೆಯನ್ನು ಸ್ನೇಹಿತನ ಬಳಿಗೆ ನೂಕಿದ್ದಾನೆ. ಕೊನೆಗೆ ಗಂಡನ ಸಮ್ಮುಖದಲ್ಲೇ ಪತ್ನಿಯ ಮೇಲೆ ಆತನ ಸ್ನೇಹಿತ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಬೇಸತ್ತ ಪತ್ನಿ, ತವರು ಮನೆಗೆ ಹೋಗಿ ಪೋಷಕರಿಗೆ ವಿಷಯ ತಿಳಿಸಿದ್ದು, ನಡಕ್ಕಾವ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಿಳೆಯ ಗಂಡ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...