alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದಲ್ಲಿ ನಡೆದಿದೆ ಆಘಾತಕಾರಿ ಘಟನೆ

ಕೊಟ್ಟಾಯಂ: ಚಲಿಸುತ್ತಿದ್ದ ಬಸ್ ನಿಂದ ಬಿದ್ದು, ತುಂಬು ಗರ್ಭಿಣಿ ಮೃತಪಟ್ಟ ಆಘಾತಕಾರಿ ಘಟನೆ ಕೇರಳದ ಕೊಟ್ಟಾಯಂ ಸಮೀಪದ ಎರತ್ತುಪೆಟ್ಟ ಬಳಿ ನಡೆದಿದೆ.

34 ವರ್ಷದ ನಾಶಿಡಾ ಮೃತಪಟ್ಟವರು. ಸಹೋದರಿಯೊಂದಿಗೆ ಡಿಸೆಂಬರ್ 29 ರಂದು ಖಾಸಗಿ ಬಸ್ ಹತ್ತಿದ್ದ 8 ತಿಂಗಳ ತುಂಬು ಗರ್ಭಿಣಿ ನಾಶಿಡಾಗೆ ಬಸ್ ನಲ್ಲಿದ್ದವರು ಸೀಟು ಬಿಟ್ಟು ಕೊಟ್ಟಿಲ್ಲ. ಇದರಿಂದಾಗಿ ಆಕೆ ಬಾಗಿಲ ಬಳಿ ನಿಂತುಕೊಂಡೇ ಪ್ರಯಾಣಿಸಿದ್ದಾರೆ.

ಆದರೆ, ದುರದೃಷ್ಟವಶಾತ್ ತಿರುವಿನಲ್ಲಿ ಬಸ್ ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ವೈದ್ಯರು ಸತತ ಪ್ರಯತ್ನದಿಂದ ಮಗುವನ್ನು ಉಳಿಸಿದ್ದಾರೆ.

ಬಸ್ ನಲ್ಲಿದ್ದ ಪ್ರಯಾಣಿಕರು ತುಂಬು ಗರ್ಭಿಣಿಗೆ ಸೀಟು ಬಿಟ್ಟುಕೊಟ್ಟಿಲ್ಲ. ಇದರಿಂದಾಗಿ ಆಕೆ ಬಿದ್ದಿದ್ದಾರೆ ಎಂದು ನಾಶಿಡಾ ಪತಿ ಥಾಹಾ ಹೇಳಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಘಟನೆಯ ಬಗ್ಗೆ ಕ್ರಮ ಕೈಗೊಂಡಿದ್ದು, ವರದಿ ನೀಡುವಂತೆ ಕೊಟ್ಟಾಯಂ ಜಿಲ್ಲಾ ಪೊಲೀಸ್ ಅಧೀಕ್ಷಕ ಮತ್ತು ಆರ್.ಟಿ.ಓ. ಇಲಾಖೆಗೆ ಸೂಚನೆ ನೀಡಿದೆ.

ಕೇರಳ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಬಸ್ ಗಳಲ್ಲಿ ಗರ್ಭಿಣಿಯರಿಗೆ ಕನಿಷ್ಟ 1 ಸೀಟನ್ನು ಕಾಯ್ದಿಸಬೇಕಿದೆ. ಆದರೆ, ನಾಶಿಡಾ ಅವರಿಗೆ ಸೀಟು ಬಿಟ್ಟುಕೊಡದ ಪ್ರಯಾಣಿಕರು ದುರಂತಕ್ಕೆ ಕಾರಣವಾಗಿದ್ದಾರೆ. ಬಸ್ ಚಾಲಕನ ಅತಿವೇಗದ ಚಾಲನೆಯಿಂದ ನಾಶಿಡಾ ತಿರುವಿನಲ್ಲಿ ಆಯತಪ್ಪಿ ಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...