alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯಪ್ರದೇಶದಲ್ಲೊಂದು ಮರ್ಯಾದಾಗೇಡು ಹತ್ಯೆ

ತಾಯಿಗೆ ಅನಾರೋಗ್ಯವೆಂದು ಹೇಳಿ ಮಗಳನ್ನು ಕರೆಯಿಸಿಕೊಂಡ ಕುಟುಂಬವೊಂದು ಆಕೆಯನ್ನು ಕೊಂದಿರೋ ಘಟನೆ ಮಧ್ಯಪ್ರದೇಶದ ಬರ್ವಾನಿ ಎಂಬಲ್ಲಿ ನಡೆದಿದೆ. ಮಗಳು ಅಂತರ್ಜಾತಿ ವಿವಾಹವಾಗಿರುವ ಬಗ್ಗೆ ಅಸಮಾಧಾನಗೊಂಡಿದ್ದ ಕುಟುಂಬದ ಸದಸ್ಯರೇ ಇಂಥ ಹೇಯ ಕೃತ್ಯ ಎಸಗಿದ್ದಾರೆ.

24 ವರ್ಷದ ಸರಳ ಮಾಲಿ ಎಂಬಾಕೆ ಬೇರೊಂದು ಜಾತಿಯ ಯುವಕ ಪಂಕಜ್ ಮಾಲಿ ಎಂಬಾತನನ್ನು ವರ್ಷದ ಹಿಂದೆ ಮದುವೆಯಾಗಿದ್ದಳು. ಈ ಬಗ್ಗೆ ಆಕೆಯ ಕುಟುಂಬಕ್ಕೆ ಸಮ್ಮತಿಯಿರಲಿಲ್ಲ. ಹೀಗಾಗಿ ಉಪಾಯವಾಗಿ ಮನೆಗೆ ಕರೆಯಿಸಿ ಆಕೆಯನ್ನು ಕೊಲೆ ಮಾಡಿದ್ದಾರೆ.

ಪೊಲೀಸರು ಈಗಾಗಲೇ ಆರೋಪಿಗಳಾದ ಆಕೆಯ ತಂದೆ ದೇವಿದಾಸ್, ತಾಯಿ ತುಳಸಿಬಾಯಿ ಹಾಗೂ ಸಹೋದರ ಹೀರಾಲಾಲ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...