alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹೇತರ ಸಂಬಂಧ ಮುಂದುವರೆಸಲು ನಿರಾಕರಿಸಿದ್ದಕ್ಕೆ ಕೊಲೆ

ದೆಹಲಿಯಲ್ಲಿ ನಡೆದ ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿ ಹತ್ಯೆ ಪ್ರಕರಣದ ಆರೋಪಿ ಮೇಜರ್ ನಿಖಿಲ್ ಹಾಂಡಾ ತಪ್ಪೊಪ್ಪಿಕೊಂಡಿದ್ದಾನೆ. ವಿವಾಹೇತರ ಸಂಬಂಧ ಮುಂದುವರಿಸಲು ಶೈಲಜಾ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದೆ ಎಂದಿದ್ದಾನೆ.

ಶನಿವಾರ ದೆಹಲಿಯಲ್ಲಿ ಶೈಲಜಾ ಕತ್ತು ಕೊಯ್ದು ಕೊಲೆ ಮಾಡಲಾಗಿತ್ತು. ಭಾನುವಾರ ಆರೋಪಿ ಮೇಜರ್ ನಿಖಿಲ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಮೇಜರ್ ತಪ್ಪೊಪ್ಪಿಕೊಂಡಿದ್ದಾನಂತೆ. ಶೈಲಜಾ ಹಾಗೂ ನಿಖಿಲ್ 2015ರಿಂದಲೇ ಪರಿಚಿತರು.

ಅಮಿತ್ ಹಾಗೂ ನಿಖಿಲ್ ಇಬ್ಬರು ದೀಮಾಪುರ್ ನಲ್ಲಿ ಕೆಲಸ ಮಾಡ್ತಿದ್ದರು. ಕಾರ್ಯಕ್ರಮದಲ್ಲಿ ನಿಖಿಲ್ ಹಾಗೂ ಶೈಲಜಾ ಪರಿಚಿತರಾಗಿದ್ದರು. ಕೆಲ ತಿಂಗಳುಗಳ ಹಿಂದೆ ಅಮಿತ್ ದೆಹಲಿಗೆ ವರ್ಗಗೊಂಡಿದ್ದರು. ಇದೇ ಕಾರಣಕ್ಕೆ ಶೈಲಜಾ ಕೂಡ ದೆಹಲಿಗೆ ಬಂದಿದ್ದಳು. ಪತ್ನಿ ಸಂಬಂಧದ ಬಗ್ಗೆ ತಿಳಿದಿದ್ದ ಅಮಿತ್ , ನಿಖಿಲ್ ಜೊತೆ ಸಂಬಂಧ ಕಡಿದುಕೊಳ್ಳುವಂತೆ ಎಚ್ಚರಿಕೆ ನೀಡಿದ್ದರು. ಪತಿ ಮಾತಿಗೆ ಒಪ್ಪಿಗೆ ನೀಡಿದ್ದ ಶೈಲಜಾ ನಿಖಿಲ್ ಜೊತೆ ಮಾತುಕತೆ ನಿಲ್ಲಿಸಿದ್ದಳು.

ಇದು ನಿಖಿಲ್ ಕೋಪಕ್ಕೆ ಕಾರಣವಾಗಿತ್ತು. ಶೈಲಜಾ ಆರ್ಮಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗ್ತಿದ್ದಾಳೆಂಬದನ್ನು ತಿಳಿದಿದ್ದ ನಿಖಿಲ್ ನೋವಿನ ನೆಪ ಹೇಳಿ ತಾನೂ ದೆಹಲಿಗೆ ಬಂದಿದ್ದ. ಶನಿವಾರ ಶೈಲಜಾ ಕೊಲೆ ಮಾಡಿದ್ದಾನೆ. ಆರು ತಿಂಗಳಲ್ಲಿ ನಿಖಿಲ್, ಶೈಲಜಾಗೆ 3 ಸಾವಿರಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದನಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...