alex Certify
ಕನ್ನಡ ದುನಿಯಾ       Mobile App
       

Kannada Duniya

ಬೌದ್ಧ ಮಠದಲ್ಲಿ ನಡೀತು 15 ಬಾಲ ಲಾಮಾಗಳ ಮೇಲೆ ಲೈಂಗಿಕ ಕಿರುಕುಳ

ಬಿಹಾರದ ಮಿಜಾಫರ್ಪುರ್ ಆಶ್ರಯ ಮನೆ ಹಗರಣದ ತನಿಖೆ ವಿಚಾರಣೆಯಲ್ಲಿರುವಾಗ್ಲೇ ಬಿಹಾರದ ಇನ್ನೊಂದು ಜಿಲ್ಲೆಯಲ್ಲಿ ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಗಯಾ ಜಿಲ್ಲೆಯ ಪ್ರಸಿದ್ಧ ಸ್ಥಳ ಬೋಧ್ ಗಯಾದ ಬೌದ್ಧರ ಆಶ್ರಮದಲ್ಲಿ ಲೈಂಗಿಕ ಕಿರುಕುಳ ನಡೆದಿದೆ.

ಬೌದ್ಧ ಮಠದಲ್ಲಿರುವ 15 ಬಾಲ ಲಾಮಾಗಳು ಕಿರುಕುಳ ದೂರು ದಾಖಲಿಸಿದ್ದಾರೆ. ಪ್ರಜಾ ಜ್ಯೋತಿ ಬೌದ್ಧ ಜ್ಞಾನ ಶಾಲೆ ಮತ್ತು ಧ್ಯಾನ ಕೇಂದ್ರದಲ್ಲಿ ಘಟನೆ ನಡೆದಿದೆ. ಬೌದ್ಧ ಸನ್ಯಾಸಿ ಭಿಂಜು ಭಂತೆ ಸುಜಾಯ್ ವಿರುದ್ಧ ಲೈಂಗಿಕ ಕಿರುಕುಳ, ಅನೈತಿಕ ಕೆಲಸ, ಮಕ್ಕಳ ಮೇಲೆ ಹಲ್ಲೆ, ಆಹಾರ ನೀಡದಿರುವುದು ಸೇರಿದಂತೆ ಅನೇಕ ದೂರುಗಳು ದಾಖಲಾಗಿವೆ.

ಮಠದಲ್ಲಿ 21-22 ಕೋಣೆಗಳಿದ್ದು, ಅದ್ರಲ್ಲಿ 2 ಕೋಣೆಗೆ ಮಾತ್ರ ಸಿಸಿ ಟಿವಿಯಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೌದ್ಧ ಸನ್ಯಾಸಿಯನ್ನು ಬಂಧಿಸಿದ್ದಾರೆ. ಸಿಸಿ ಟಿವಿ ಪರಿಶೀಲನೆ ನಡೆಯುತ್ತಿದೆ. ಬಾಲ ಲಾಮಾಗಳ ವೈದ್ಯಕೀಯ ಪರೀಕ್ಷೆ ನಡೆದಿದೆ. ಅಂತರಾಷ್ಟ್ರೀಯ ಬೌದ್ಧ ಮಂಡಳಿ ಬೋಧ್ ಗಯಾದಲ್ಲಿ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...