alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ದೇಹ ಮಾರಿಕೊಂಡಿದ್ಲಂತೆ ಹುಡುಗಿ…!

16 ವರ್ಷದ ಹುಡುಗಿಯೊಬ್ಬಳು ತಾನು ವೇಶ್ಯಾವಾಟಿಕೆ ಏಕೆ ಮಾಡ್ತಿದ್ದೆ ಎಂಬುದನ್ನು ಪೊಲೀಸ್ ಮುಂದೆ ಹೇಳಿದ್ದಾಳೆ. ಆಕೆ ಮಾತು ಕೇಳಿ ಪೊಲೀಸ್ ಕಣ್ಣಲ್ಲೇ ನೀರು ಬಂದಿದೆ.

ಘಟನೆ ನಡೆದಿರೋದು ಹರ್ಯಾಣದ ಕುರುಕ್ಷೇತ್ರದಲ್ಲಿ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಮಲ ತಂದೆಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ತಾಯಿ ಸೀಮಾ ಹಾಗೂ ಮಲ ತಂದೆ ಮೋಹನ್ ಲಾಲ್ ವಿರುದ್ಧ 16 ವರ್ಷದ ಹುಡುಗಿಯೊಬ್ಬಳು 2016ರಲ್ಲಿ ದೂರು ನೀಡಿದ್ದಳು.

ತಾಯಿ ಹಾಗೂ ಮಲ ತಂದೆ ತನ್ನಿಂದ ಕೆಟ್ಟ ಕೆಲಸ ಮಾಡಿಸ್ತಿದ್ದಾರೆಂದು ದೂರಿದ್ದಳು. ತನಗೆ ಸಾರಾಯಿ ಕುಡಿಸಿ ವೇಶ್ಯಾವಾಟಿಕೆ ನಡೆಸುತ್ತಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೆ ಹೊಡೆಯುತ್ತಾರೆ. ತಂದೆ-ತಾಯಿಯಿಂದ ತಪ್ಪಿಸಿಕೊಂಡು ಆಂಟಿ ಮನೆಗೆ ಓಡಿ ಬಂದಿದ್ದೇನೆ. ಎಲ್ಲ ವಿಷ್ಯವನ್ನು ಆಂಟಿ ಮುಂದೆ ಹೇಳಿದ್ದೇನೆ. ಅವರ ನೆರವಿನಿಂದ ದೂರು ನೀಡುತ್ತಿದ್ದೇನೆಂದು ಹುಡುಗಿ ಹೇಳಿದ್ದಳು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಲ ತಂದೆ ಹಾಗೂ ತಾಯಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಇಬ್ಬರಿಗೂ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...