alex Certify
ಕನ್ನಡ ದುನಿಯಾ       Mobile App
       

Kannada Duniya

ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದ ರಾಮ್ ರಹೀಂ ಶಿಷ್ಯ

ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ನ ಶಿಷ್ಯನೊಬ್ಬ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದಿದ್ದಾನೆ.

ಶುಕ್ರವಾರದಂದು ಪಶ್ಚಿಮ ಬಂಗಾಳದ ಪೊಲೀಸರು ಕೋಲ್ಕತ್ತಾದ ಬುರ್ರಾ ಬಜಾರ್ ನಲ್ಲಿರುವ ಗೆಸ್ಟ್ ಹೌಸ್ ಒಂದರ ಮೇಲೆ ದಾಳಿ ಮಾಡಿದಾಗ ಪ್ರಮೋದ್ ಕುಮಾರ್ ಸಿಂಘಾನಿಯಾ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಕಂಡುಬಂದಿದೆ.

ಈ ಗೆಸ್ಟ್ ಹೌಸ್ ನಲ್ಲಿ 10×10 ಅಡಿ ಅಗಲದ 25 ಮರದ ಕ್ಯಾಬಿನ್ ಗಳನ್ನು ನಿರ್ಮಿಸಲಾಗಿದ್ದು, ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು.

ಪೊಲೀಸರ ದಾಳಿ ವೇಳೆ ಪ್ರಮೋದ್ ಕುಮಾರ್ ಸಿಂಘಾನಿಯಾ ಇಂತಹ ಸಂದರ್ಭಗಳಲ್ಲಿ ತಾನು ತಪ್ಪಿಸಿಕೊಳ್ಳಲೆಂದು ನಿರ್ಮಿಸಿಕೊಂಡಿದ್ದ ಸುರಂಗ ಮಾರ್ಗದ ಮೂಲಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...