alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ ತಂದೆ-ಮಗಳ ವೇಶ್ಯಾವಾಟಿಕೆ ದಂಧೆ

ಮಹಿಳೆಯರಿಗೆ ಡ್ರಗ್ಸ್ ಕೊಟ್ಟು ಅವರ ಮೇಲೆ ಅತ್ಯಾಚಾರವೆಸಗಿ ಅದನ್ನು ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ಹರಿಯಾಣದ ಯಮುನಾನಗರದಲ್ಲಿ ತಂದೆ-ಮಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಹಿಳೆ, ಎಲ್ಲರ ಜೊತೆ ಸ್ನೇಹ ಸಂಪಾದಿಸಿ ಮನೆಗೆ ಕರೆಯುತ್ತಿದ್ಲು. ಅಲ್ಲಿ ಅವರಿಗೆ ಡ್ರಗ್ಸ್ ಬೆರೆಸಿದ ತಿನಿಸುಗಳನ್ನು ಕೊಡುತ್ತಿದ್ಲು. ನಂತರ ತಂದೆ, ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದ. ಅದನ್ನೆಲ್ಲ ವಿಡಿಯೋ ಮಾಡಿಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ರು. ಬೆದರಿಸಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ರು. ಈ ನೀಚ ಕೃತ್ಯದಿಂದ್ಲೇ ತಂದೆ-ಮಗಳು ಹಣ ಸಂಪಾದನೆಗೆ ಇಳಿದಿದ್ರು.

ವೇಶ್ಯಾವಾಟಿಕೆಗೆ ಒಪ್ಪದೇ ಇದ್ರೆ ವಿಡಿಯೋವನ್ನು ಇಂಟರ್ನೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸುತ್ತಿದ್ರು. ಬಡ ಹೆಣ್ಣುಮಕ್ಕಳೇ ಇವರ ಟಾರ್ಗೆಟ್ ಆಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಸಂತ್ರಸ್ಥ ಮಹಿಳೆಯರಿಂದ್ಲೇ ಹಣ ವಸೂಲಿ ಕೂಡ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...