alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲಸದ ಆಸೆ ಹೊತ್ತು ಬಾಂಗ್ಲಾದಿಂದ ಭಾರತಕ್ಕೆ ಬಂದವಳಿಗೆ ಇದೆಂತಾ ಶಿಕ್ಷೆ

banglasdesh-1

ಮಹಾರಾಷ್ಟ್ರದಲ್ಲಿ ಸೆಕ್ಸ್ ರಾಕೆಟ್ ನಡೆಸ್ತಿದ್ದ ದಂಪತಿ ಪೊಲೀಸ್ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಮಾನವ ಕಳ್ಳಸಾಗಣೆ ವಿರೋಧಿ ದಳ ಹಾಗೂ ಕ್ರೈಂ ಬ್ರಾಂಚ್ ಪೊಲೀಸರು ಕಾರ್ಯಾಚರಣೆ ನಡೆಸಿ, ಪತಿ-ಪತ್ನಿ ಹಾಗೂ ಬಾಂಗ್ಲಾ ದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಅವರ ಕಪಿಮುಷ್ಠಿಯಲ್ಲಿದ್ದ 20 ವರ್ಷದ ಹುಡುಗಿಯನ್ನು ವಶಕ್ಕೆ ಪಡೆಯಲಾಗಿದೆ.

ಹುಡುಗಿಯ ವಿಚಾರಣೆ ನಡೆಸಿದ ಪೊಲೀಸರಿಗೆ ಕೆಲವೊಂದು ಮಹತ್ವದ ಅಂಶಗಳು ಗೊತ್ತಾಗಿವೆ. ಇದೊಂದು ಅಂತರಾಷ್ಟ್ರೀಯ ರಾಕೆಟ್ ಆಗಿದ್ದು, ಗಡಿಯಾಚೆಗೂ ಸಂಪರ್ಕ ಹೊಂದಿದೆಯಂತೆ. ಹೊಟೇಲ್ ನಲ್ಲಿ ಕೆಲಸ ಕೊಡುವ ಆಸೆ ತೋರಿಸಿ  ಬಾಂಗ್ಲಾದೇಶದ ಹುಡುಗಿಯನ್ನು ಭಾರತಕ್ಕೆ ಕರೆತರಲಾಗಿತ್ತಂತೆ. ನಂತರ ಶಾಹಿದ್ ಅನ್ಸಾರಿ, ಆತನ ಪತ್ನಿ ಡಾಲಿಯಾ, ಹುಡುಗಿಯನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾರೆ.

ದಂಪತಿ ಜೊತೆ ಬಾಂಗ್ಲಾ ದೇಶದ ಬಾಬುಅಲಿ ಅಜಗರ್ ಎಂಬಾತನನ್ನು ಪೊಲೀಸರು ಬಂಧಿಸಿ, ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...