alex Certify
ಕನ್ನಡ ದುನಿಯಾ       Mobile App
       

Kannada Duniya

4 ವರ್ಷದ ಬಾಲಕನನ್ನು ಮಂಚದಡಿ ಕರೆದೊಯ್ದ ಯುವಕ

ಯುವಕನೊಬ್ಬ ರಸ್ತೆಯಲ್ಲಿ ಆಡ್ತಿದ್ದ ಬಾಲಕನ್ನು ಅಪಹರಿಸಿದ್ದಾನೆ.ಮನೆಗೆ ಕರೆದೊಯ್ದು ಮಂಚದ ಕೆಳಗೆ ಆತನ ಬಟ್ಟೆ ಬಿಚ್ಚಿದ್ದಾನೆ. ನಂತ್ರ ನಡೆದ ಘಟನೆ ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಸಮಯಕ್ಕೆ ಸರಿಯಾಗಿ ಬಾಲಕನನ್ನು ರಕ್ಷಣೆ ಮಾಡಲಾಗಿದೆ. ಇಲ್ಲವಾದ್ರೆ ಆತನ ಪ್ರಾಣ ಹೋಗ್ತಿತ್ತೆಂದು ಪೊಲೀಸರು ಹೇಳಿದ್ದಾರೆ. ದೂರು ದಾಖಲಾದ ಕೆಲವೇ ಗಂಟೆಗಳಲ್ಲಿ ಬಾಲಕನನ್ನು ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಎಸ್ಪಿ ಬಹುಮಾನ ಘೋಷಣೆ ಮಾಡಿದ್ದಾರೆ.

ಘಟನೆ ಉತ್ತರಾಖಂಡದ ಡೆಹ್ರಾಡೂನ್ ನ ಗ್ರಾಮವೊಂದರಲ್ಲಿ ನಡೆದಿದೆ. ನಾಲ್ಕು ವರ್ಷದ ಬಾಲಕನೊಬ್ಬ ಅಣ್ಣನ ಜೊತೆ ಬುಧವಾರ ಆಟವಾಡ್ತಿದ್ದ ಎನ್ನಲಾಗಿದೆ. ಅಲ್ಲಿಗೆ ಬಂದ ಪಂಕಜ್ ಸಿಂಗ್ ಎಂಬಾತ ನಾಲ್ಕು ವರ್ಷದ ಬಾಲಕನ ಕೈ ಹಿಡಿದುಕೊಂಡು ಹೋಗಿದ್ದಾನೆ. ದೊಡ್ಡ ಮಗ ತಾಯಿಗೆ ವಿಷ್ಯ ತಿಳಿಸಿದ್ದಾನೆ. ತಾಯಿ ಹಾಗೂ ಕುಟುಂಬಸ್ಥರು ಮಗನ ಹುಡುಕಾಟ ಶುರುಮಾಡಿದ್ದಾರೆ.

ಈ ಬಗ್ಗೆ ಪೊಲೀಸರಿಗೂ ದೂರು ದಾಖಲಾಗಿದೆ. ಸ್ಥಳೀಯರು ಪಂಕಜ್ ಸಿಂಗ್ ಜೊತೆ ಮಗುವನ್ನು ನೋಡಿರುವುದಾಗಿ ಹೇಳಿದ್ದಾರೆ. ಪಂಕಜ್ ಸಿಂಗ್ ಮನೆ ಮೇಲೆ ರಾತ್ರಿ 12 ಗಂಟೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬೆತ್ತಲಾಗಿದ್ದ ಬಾಲಕ ಹಾಗೂ ಪಂಕಜ್ ಸಿಕ್ಕಿದ್ದಾರೆ. ಮಗು ಬಾಯಿಗೆ ಬಟ್ಟೆ ಕಟ್ಟಿದ್ದ ಪಂಕಜ್ ಎಂದು ಪೊಲೀಸರು ಹೇಳಿದ್ದಾರೆ. ಬಾಲಕನ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...