alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ನೀಡದ ಕಾರಣಕ್ಕೆ ಅಕ್ರಮ ಸಂಬಂಧ ಹೊಂದಿದ್ದವನ ವಿರುದ್ಧ ದೂರು ನೀಡಿದ್ಲಾ ಮಹಿಳೆ…?

ಸಾಮಾಜಿಕ ಜಾಲತಾಣದಲ್ಲಿ ಯುವಕನೊಬ್ಬ ಅಪ್ ಲೋಡ್ ಮಾಡಿರುವ ವಿಡಿಯೋ ಈಗ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋದಲ್ಲಿ ಆತ, ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಆಕೆ ಕೇಳಿದಷ್ಟು ಹಣ ನೀಡದ ಕಾರಣಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆಗಾಗಿ ಪೊಲೀಸ್ ಠಾಣೆಗೆ ತೆರಳುತ್ತಿದ್ದೇನೆ. ಗೆಳೆಯರು ಈ ವಿಡಿಯೋವನ್ನು ಆದಷ್ಟು ಮಂದಿಗೆ ತಲುಪಿಸಬೇಕೆಂದು ಕೇಳಿಕೊಂಡಿದ್ದಾನೆ.

ಚಿತ್ರದುರ್ಗ ಮೂಲದ ವಿಜಯ್ ಕುಮಾರ್ ಎಂಬಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಈ ಸೆಲ್ಫಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, ಇದರಲ್ಲಿ ತಾನು ಧಾರವಾಡದಲ್ಲಿದ್ದ ವೇಳೆ ಅಲ್ಲಿನ ಮಹಿಳೆಯೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಆಕೆ ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ ಹಿನ್ನಲೆಯಲ್ಲಿ ಆಕೆಯಿಂದ ತಪ್ಪಿಸಿಕೊಂಡು ಹೈದರಾಬಾದಿಗೆ ಬಂದಿದ್ದೆ ಎಂದಿದ್ದಾನೆ.

ಇದೀಗ ಮಹಿಳೆ ನನ್ನ ವಿರುದ್ಧ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದ್ದು, ವಿಷಯ ತಿಳಿದುಕೊಳ್ಳಲು ಫೋನ್ ಮಾಡಿದ ವೇಳೆ ಏನಿಲ್ಲ ಚಿಕ್ಕ ವಿಚಾರಣೆ ಅಷ್ಟೇ ಎಂದು ಹೇಳಿದ್ದಾಳೆ. ಹೀಗಾಗಿ ಧಾರವಾಡಕ್ಕೆ ತೆರಳುತ್ತಿದ್ದೇನೆ. ಆಕೆ ಈ ಮುಂಚೆ ಬೇರೊಬ್ಬರ ಜೊತೆಯೂ ಸಂಬಂಧ ಹೊಂದಿದ್ದಳು ಎಂದು ವಿಜಯ್ ಕುಮಾರ್ ಸೆಲ್ಫಿ ವಿಡಿಯೋದಲ್ಲಿ ಅಲವತ್ತುಕೊಂಡಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...