alex Certify
ಕನ್ನಡ ದುನಿಯಾ       Mobile App
       

Kannada Duniya

ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಸ್ವಯಂಘೋಷಿತ ದೇವಮಾನವ ಅರೆಸ್ಟ್

ಮಹಾರಾಷ್ಟ್ರದ ಪ್ರಭಾನಿಯಲ್ಲಿನ ಸ್ವಯಂಘೋಷಿತ ದೇವಮಾನವನೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ಆಸಿಫ್ ನೂರಿ ಎಂಬಾತನೇ ಸ್ವಯಂಘೋಷಿತ ದೇವಮಾನವ. ಆಡಿಯೊ ಮತ್ತು ವಿಡಿಯೋ ಸಾಕ್ಷ್ಯಗಳೊಂದಿಗೆ ಕೆಲವರು ನೀಡಿದ ದೂರಿನ ಆಧಾರದ ಮೇಲೆ ಆಸಿಫ್ ನೂರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮರಾಠವಾಡದಲ್ಲಿನ ಮದರಾಸದ ದರ್ಗಾ ಒಂದರಲ್ಲಿದ್ದ ಸ್ವಯಂ ಘೋಷಿತ ದೇವಮಾನವನ ಬಳಿ ಮಹಾರಾಷ್ಟ್ರದ ಅನೇಕರು ತಮ್ಮ ಸಮಸ್ಯೆಯ ಪರಿಹಾರಕ್ಕೆ ಬರುತ್ತಿದ್ದರು. ಆ ವೇಳೆಯಲ್ಲಿ ಅದರಲ್ಲೂ ಪುರುಷರ ಬಳಿ ಆತ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ. ಅನೇಕ ಪುರುಷರು ಅವನಿಂದ ಲೈಂಗಿಕ ದೌರ್ಜನ್ಯಕ್ಕೆ ಈಗಾಗ್ಲೇ ಒಳಪಟ್ಟಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಆತನನ್ನ ಬಂಧಿಸೋಕೆ ಸಾಕ್ಷ್ಯ ಸಂಗ್ರಹದಲ್ಲಿ ತೊಡಗಿದ್ದರು.

ಮದುವೆಯಾಗಿದ್ದ ಪುರುಷರನ್ನೇ ಆಸಿಫ್ ನೂರಿ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದ ಎಂದು ದೂರುದಾರರು ತಿಳಿಸಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಬರುವವರನ್ನ ಪೂಜೆಗೆಂದು ಪ್ರತ್ಯೇಕ ಕೋಣೆಗೆ ಕರೆದೊಯ್ಯುತ್ತಿದ್ದ ಆತ, ಆನಂತರ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ ಅಂತ ದೂರುದಾರರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...